-->
ಬೆಳಗ್ಗೆ ಈ 5 ಪಾನೀಯಗಳನ್ನು ಕುಡಿಯುವುದರಿಂದ ಅತಿ ವೇಗವಾಗಿ ನಿಮ್ಮ ಹೊಟ್ಟೆಯ ಬೊಜ್ಜನ್ನು ಕರಗಿಸುತ್ತದೆ..!

ಬೆಳಗ್ಗೆ ಈ 5 ಪಾನೀಯಗಳನ್ನು ಕುಡಿಯುವುದರಿಂದ ಅತಿ ವೇಗವಾಗಿ ನಿಮ್ಮ ಹೊಟ್ಟೆಯ ಬೊಜ್ಜನ್ನು ಕರಗಿಸುತ್ತದೆ..!

 ನಿಂಬೆ ನೀರು:
ಬೆಳಿಗ್ಗೆ ಎದ್ದ ತಕ್ಷಣ ಬಿಸಿ ನೀರಿಗೆ ನಿಂಬೆ ರಸ ಬೆರೆಸಿ ಕುಡಿಯುವುದರ ಮೂಲಕ ನಿಮ್ಮ ದಿನವನ್ನು ಪ್ರಾರಂಭಿಸಬಹುದು. ಎದ್ದ ನಂತರ ಈ ರೀತಿ ನಿಂಬೆ ನೀರನ್ನು ಕುಡಿಯುವುದರಿಂದ ದೇಹ ಉಲ್ಲಾಸದಿಂದ ಕೂಡಿರುತ್ತದೆ. ಎದ್ದ ತಕ್ಷಣ ಅಂದರೆ ಬ್ರೆಶ್ ಮಾಡುವ ಮೊದಲು ನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು. ನೀರು ಕುಡಿಯಲು ಇಷ್ಟವಿಲ್ಲದವರು ನಿಂಬೆ ನೀರನ್ನು ಕುಡಿಯಬಹುದು. 

 ಗ್ರೀನ್ ಟೀ:
ಗ್ರೀನ್ ಟೀಯಲ್ಲಿ ಉತ್ಕರ್ಷಣ ನಿರೋಧಕಗಳು ಅಧಿಕವಾಗಿವೆ. ಹೀಗಾಗಿ, ದೀರ್ಘಕಾಲದ ಕಾಯಿಲೆಗಳನ್ನು ತಪ್ಪಿಸಲು ಇದು ಸಹಾಯ ಮಾಡುತ್ತದೆ. ತೂಕ ಇಳಿಸಿಕೊಳ್ಳಲು ಬಯಸುವವರು ಗ್ರೀನ್ ಟೀ ಕುಡಿಯಲೇಬೇಕು ಎನ್ನುತ್ತಾರೆ ಆರೋಗ್ಯ ತಜ್ಞರು. ಅಲ್ಲದೆ, ಗ್ರೀನ್ ಟೀ ಮೂತ್ರಪಿಂಡದ ಕಾರ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. 

 ಬ್ಲಾಕ್ ಕಾಫಿ:
ಬ್ಲಾಕ್ ಕಾಫಿಯನ್ನು ಕಡಿಮೆ ಕೊಬ್ಬಿನಂಶ ಹೊಂದಿರುವ ಪಾನೀಯಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಇದರಲ್ಲಿ ಕೆಫೀನ್ ಇರುತ್ತದೆ. ಇದು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಆದ್ದರಿಂದ ದೇಹದಲ್ಲಿನ ರಕ್ತ ಕಣಗಳ ಮೇಲೆ ಪರಿಣಾಮ ಬೀರುವುದಿಲ್ಲ. ಟೈಪ್ 2 ಮಧುಮೇಹ ಇರುವವರು ಬ್ಲಾಕ್ ಕಾಫಿ ಕುಡಿಯಬಹುದು. 

ದಾಲ್ಚಿನ್ನಿ ಚಹಾ:
ಚಕ್ಕೆ ಚಹಾವು ಸುವಾಸನೆ ಹೊಂದಿರುವ ಪಾನೀಯವಾಗಿದೆ. ಹಸಿವನ್ನು ಕಡಿಮೆ ಮಾಡಲು ಚಕ್ಕೆ ಚಹಾವನ್ನು ಕುಡಿಯಬಹುದು. ಇದನ್ನು ಕುಡಿಯುವುದರಿಂದ, ದೇಹದಲ್ಲಿನ ಸಕ್ಕರೆಯ ಮಟ್ಟವು ಸಮತೋಲನಗೊಳ್ಳುತ್ತದೆ. ಇನ್ಸುಲಿನ್ ಪ್ರತಿರೋಧವನ್ನು ಸೃಷ್ಟಿಸುತ್ತದೆ. ಕೆಲವು ಕ್ಲಿನಿಕಲ್ ಅಧ್ಯಯನಗಳು ಚಕ್ಕೆ ಚಹಾ ಹೃದ್ರೋಗವನ್ನು ತಡೆಯಲು ಸಹಾಯ ಮಾಡುತ್ತದೆ ಎನ್ನುವುದನ್ನು ಕಂಡುಹಿಡಿದಿದೆ. 

ಅಲೋವೆರಾ ಜ್ಯೂಸ್ :
ಅಲೋವೆರಾ ರಸವನ್ನು ಅಲೋವೆರಾದ ಸಾರದಿಂದ ತಯಾರಿಸಲಾಗುತ್ತದೆ. ಇದರಲ್ಲಿ ದೇಹಕ್ಕೆ ಬೇಕಾದ ಅನೇಕ ಪೋಷಕಾಂಶಗಳು ಅಡಗಿರುತ್ತವೆ. ಅಲೋವೆರಾ ಜ್ಯೂಸ್ ಹೊಟ್ಟೆಯ ಸಮಸ್ಯೆಗಳು, ಜೀರ್ಣಕಾರಿ ಸಮಸ್ಯೆಗಳು, ಮಲಬದ್ಧತೆ ಮುಂತಾದ ಅನೇಕ ಅಸ್ವಸ್ಥತೆಗಳನ್ನು ಸುಲಭವಾಗಿ ಗುಣಪಡಿಸುತ್ತದೆ. 

Ads on article

Advertise in articles 1

advertising articles 2

Advertise under the article