-->
ಐದು ದಿನಗಳ ಬಳಿಕ ಈ 6 ರಾಶಿಯವರ ವೃತ್ತಿ ಬದುಕಿನಲ್ಲಿ ಅದೃಷ್ಟದ ಬಾಗಿಲು ತೆರೆಯಲಿದ್ದಾನೆ ಬುಧ!

ಐದು ದಿನಗಳ ಬಳಿಕ ಈ 6 ರಾಶಿಯವರ ವೃತ್ತಿ ಬದುಕಿನಲ್ಲಿ ಅದೃಷ್ಟದ ಬಾಗಿಲು ತೆರೆಯಲಿದ್ದಾನೆ ಬುಧ!


ವೃಷಭ ರಾಶಿ: 
ಮಾರ್ಗಿ ಬುಧನು ವೃಷಭ ರಾಶಿಯವರ ವೃತ್ತಿ ಬದುಕಿನಲ್ಲಿ ಧನಾತ್ಮಕ ಫಲಗಳನ್ನು ನೀಡಲಿದ್ದಾನೆ. ಇದರಿಂದಾಗಿ, ವೃತ್ತಿ ಕ್ಷೇತ್ರದಲ್ಲಿ ನೀವು ಇಷ್ಟು ದಿನಗಳಿಂದ ಎದುರಿಸುತ್ತಿದ್ದ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯುವಿರಿ. ಸ್ವಂತ ಬಿಸಿನೆಸ್ ಮಾಡುವವರಿಗೆ ವಿದೇಶಗಳಿಂದ ಹೊಸ ಹೊಸ ಅವಕಾಶಗಳು ಲಭ್ಯವಾಗಲಿದೆ.


ಮಿಥುನ ರಾಶಿ: 
ಬುಧನ ನೇರ ಸಂಚಾರವು ಮಿಥುನ ರಾಶಿಯವರಿಗೂ ಕೂಡ ಉದ್ಯೋಗ ರಂಗದಲ್ಲಿ ಉತ್ತಮ ಅವಕಾಶಗಳನ್ನು ತರಲಿದೆ. ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೆ ಸುಸಮಯ ಇದಾಗಿದೆ. 

ಸಿಂಹ ರಾಶಿ: 
ಸಿಂಹ ರಾಶಿಯಲ್ಲಿಯೇ ಬುಧ ಮಾರ್ಗಿ ಆಗಳಿದ್ದು, ಈ ಸಮಯದಲ್ಲಿ ನೀವು ವೃತ್ತಿ ಕ್ಷೇತ್ರದಲ್ಲಿ ಯಶಸ್ಸಿನ ಹೊಸ ಎತ್ತರವನ್ನು ಏರುವಿರಿ. ನಿಮ್ಮ ಕಚೇರಿಯಿಂದಲೇ ನೀವು ವಿದೇಶಕ್ಕೆ ಹೋಗಲು ಅವಕಾಶಗಳಿವೆ. 

ಧನು ರಾಶಿ: 
ಬುಧನು ಸಿಂಹರಾಶಿಯಲ್ಲಿ ನೇರವಾಗಿ ಚಲಿಸಿದಾಗ ಧನು ರಾಶಿಯವರಿಗೆ ಆದಾಯಕ್ಕೆ ಹೊಸ ಅವಕಾಶಗಳು ಲಭ್ಯವಾಗಲಿದೆ. ಈ ಸಮಯದಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲ ನಿಮ್ಮ ಜೊತೆಗಿದ್ದು ಬಂಪರ್ ಲಾಭವನ್ನು ಗಳಿಸುವಿರಿ. 

ಕುಂಭ ರಾಶಿ: 
ಮಾರ್ಗಿ ಬುಧ ಕುಂಭ ರಾಶಿಯವರಿಗೂ ವೃತ್ತಿ ಬದುಕಿನಲ್ಲಿ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದ್ದಾನೆ. ಇದರಿಂದಾಗಿ ಕುಂಭ ರಾಶಿಯವರ ಕೆಲಸಕ್ಕೆ ಮನ್ನಣೆ ದೊರೆಯುತ್ತದೆ. ಕಚೇರಿಯಲ್ಲಿ ಸಹೋದ್ಯೋಗಿಗಳು ಮತ್ತು ಅಧಿಕಾರಿಗಳು ನಿಮ್ಮ ಪರಿಶ್ರಮವನ್ನು ಮೆಚ್ಚುತ್ತಾರೆ. 

ಮೀನ ರಾಶಿ: 
ಮಾರ್ಗಿ ಬುಧನು ಮೀನ ರಾಶಿಯವರಿಗೆ ಉದ್ಯೋಗ ಕ್ಷೇತ್ರದಲ್ಲಿ ಉತ್ತಮ ಫಲಗಳನ್ನು ನೀಡಲಿದ್ದಾನೆ. ನಿಮ್ಮ ವೃತ್ತಿಜೀವನದಲ್ಲಿ ನಿಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಲು ಸರಿಯಾದ ಸಮಯ ಇದಾಗಿದೆ. 

Ads on article

Advertise in articles 1

advertising articles 2

Advertise under the article