-->
ಕನ್ಯಾ ರಾಶಿಗೆ ಸೂರ್ಯನ ಪ್ರವೇಶ‌..!ಇನ್ನು ಮುಂದೆ ಈ 6  ರಾಶಿಯವರ ಜೀವನದಲ್ಲಿ ಎಲ್ಲವೂ ಶುಭ..!

ಕನ್ಯಾ ರಾಶಿಗೆ ಸೂರ್ಯನ ಪ್ರವೇಶ‌..!ಇನ್ನು ಮುಂದೆ ಈ 6 ರಾಶಿಯವರ ಜೀವನದಲ್ಲಿ ಎಲ್ಲವೂ ಶುಭ..!


ಬುಧ ಗೋಚರ, ಸೂರ್ಯನು ಕನ್ಯಾ ರಾಶಿಗೆ ಪ್ರವೇಶಿಸುವುದು ಕೆಲವು ರಾಶಿಚಕ್ರಗಳಿಗೆ ಅದೃಷ್ಟ ತರಲಿದೆ.  ಯಾವ ಜನ್ಮ ರಾಶಿಯವರಿಗೆ ಈ ಅವಧಿಯಲ್ಲಿ ಹೆಚ್ಚಿನ ಪ್ರಯೋಜನ ದೊರಕಲಿದೆ ಎಂದು ನೋಡೋಣ. 


ಮೇಷ ರಾಶಿ: ಮೇಷ ರಾಶಿಯ ಜನರು ತಮ್ಮ ಜೀವನದಲ್ಲಿ ಸಂತೋಷವನ್ನು ಪಡೆಯುತ್ತಾರೆ. ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿ ನೆಲೆಸುತ್ತದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಸಂಗಾತಿಯಿಂದ ಸಂಪೂರ್ಣ ಬೆಂಬಲ ದೊರಕಲಿದೆ. 

ಕನ್ಯಾರಾಶಿ: ಬುಧಗ್ರಹವು ಕನ್ಯಾರಾಶಿಯನ್ನು ಆಳುವ ಗ್ರಹ. ಬುಧನ ನೇರ ಸಂಚಾರವು ಕನ್ಯಾ ರಾಶಿಯವರಿಗೆ ಸಂಪೂರ್ಣ ಲಾಭ ತರಲಿದೆ. ಈ ಸಂದರ್ಭದಲ್ಲಿ ನಿಮ್ಮ ಬಾಕಿ ಕೆಲಸಗಳು ಪೂರ್ಣಗೊಳ್ಳಲಿವೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. 


ಸಿಂಹ: ಸೂರ್ಯನು ಸಿಂಹ ರಾಶಿಯನ್ನು ಹೊಂದಿರುತ್ತಾನೆ. ಇದರಿಂದ ಸಿಂಹ ರಾಶಿಯವರಿಗೆ ಸೂರ್ಯ ಸಂಕ್ರಮಣದ ಸಮಯ ಬಹಳ ಮುಖ್ಯವಾಗುತ್ತದೆ. ಈ ಅವಧಿಯಲ್ಲಿ ಸಿಂಹ ರಾಶಿಯವರ ಬದುಕಿನಲ್ಲಿ ಸಾಕಷ್ಟು ಶುಭ ವಿಚಾರಗಳು ನಡೆಯಲಿವೆ. ಹಣಕಾಸು ಹರಿವು ಹೆಚ್ಚಲಿದೆ. 

ವೃಶ್ಚಿಕ ರಾಶಿ: ಬುಧ ಮತ್ತು ಸೂರ್ಯ ಸಂಚಾರವು ವೃಶ್ಚಿಕ ರಾಶಿಯವರಿಗೆ ಉತ್ತಮ ಫಲಿತಾಂಶ ತರುತ್ತದೆ. ಈ ಅವಧಿಯಲ್ಲಿ ನೀವು ಸಂತೋಷದ ಜೀವನ ನಡೆಸುವಿರಿ. ಹಣ ಬರುವ ಲಕ್ಷಣಗಳು ಕಾಣಿಸುತ್ತಿದೆ. 


ಕರ್ಕಾಟಕ: ಬುಧ ಮತ್ತು ಸೂರ್ಯನ ಸ್ಥಾನಗಳ ಬದಲಾವಣೆಯು ಕರ್ಕಾಟಕ ರಾಶಿಯವರಿಗೆ ಲಾಭದಾಯಕವಾಗಿರುತ್ತದೆ. ಸಕಾರಾತ್ಮಕ ಫಲಿತಾಂಶಗಳು ಗೋಚರಿಸುತ್ತವೆ. ಸಂಪತ್ತು ಸಂಗ್ರಹ ಹೆಚ್ಚಲಿದೆ. ಮನಸ್ಸಿಗೆ ಶಾಂತಿ ನೆಮ್ಮದಿ ದೊರಕಲಿದೆ. 

ಧನು ರಾಶಿ: ಬುಧ, ಸೂರ್ಯ ಸಂಚಾರದ ಪರಿಣಾಮ ಧನು ರಾಶಿಯ ಜನರ ಜೀವನದಲ್ಲಿ ಮಹತ್ವದ ಬದಲಾವಣೆಗಳನ್ನು ತರಬಹುದು. ಈ ರಾಶಿಯ ವ್ಯಾಪಾರಿಗಳು ಲಾಭವನ್ನು ಪಡೆಯುವ ಸಾಧ್ಯತೆಯಿದೆ. ಕೆಲಸದ ಪರಿಸ್ಥಿತಿ ಉತ್ತಮವಾಗಿರುತ್ತದೆ. 

Ads on article

Advertise in articles 1

advertising articles 2

Advertise under the article