ಬ್ಯಾಂಕಾಕ್ ನಿಂದ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಿಳಿದ ವ್ಯಕ್ತಿ ಬ್ಯಾಗ್ ನಲ್ಲಿ ಪತ್ತೆಯಾಯಿತು 78 ಪ್ರಾಣಿಗಳು
Friday, September 8, 2023
ಬೆಂಗಳೂರು: ಬ್ಯಾಂಕಾಕ್ ನಿಂದ ಬ್ಯಾಗ್ ನಲ್ಲಿರಿಸಿ 78 ಪ್ರಾಣಿಗಳನ್ನು ಅಕ್ರಮ ಸಾಗಾಟ ಮಾಡುತ್ತಿದ್ದ ವ್ಯಕ್ತಿಯನ್ನು ದೇವನಹಳ್ಳಿ ಬಳಿಯ ಕೆಂಪೇಗೌಡ ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಅನುಮಾನಾಸ್ಪದ ರೀತಿಯಲ್ಲಿ ವರ್ತಿಸುತ್ತಿದ್ದ ಪ್ರಯಾಣಿಕನನ್ನು ತಡೆಹಿಡಿದು ಬ್ಯಾಗ್ ಪರಿಶೀಲನೆ ನಡೆಸಿದ ವೇಳೆ ವಿಚಾರ ಬೆಳಕಿಗೆ ಬಂದಿದೆ.
ಬ್ಯಾಂಕಾಕ್‌ನಿಂದ ಏರ್ ಏಷ್ಯಾ FD 137 ವಿಮಾನದಲ್ಲಿ ವ್ಯಕ್ತಿ ಬಂದಿದ್ದ. ಆತನ ಬ್ಯಾಗ್‌ನಲ್ಲಿ 55 ಸಜೀವ ಹೆಬ್ಬಾವು ಮರಿಗಳು, 17 ಕಾಳಿಂಗಸರ್ಪದ ಮರಿಗಳು ಹಾಗೂ ಸತ್ತ 6 ಕಪ್ಪುಚಿನ್ ಕೋತಿ ಮರಿಗಳ ಕಳೇಬರ ಪತ್ತೆ ಆಗಿದ್ದು, ಪ್ರಾಣಿಗಳ ಸಮೇತ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ.
ಈ ಬಗ್ಗೆ ಪ್ರಾಣಿಗಳ ಅಕ್ರಮ ಸಾಗಾಟ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತಿದೆ. ಸದ್ಯ ಪ್ರಾಣಿಗಳನ್ನ ಅರಣ್ಯ ಇಲಾಖೆಗೆ ಒಪ್ಪಿಸಲಾಗಿದೆ. ಇವುಗಳನ್ನು ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಕಳ್ಳಸಾಗಣೆ ಮಾಡಲಾಗುತ್ತಿತ್ತು ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.