ಮಂಗಳೂರು: ಶ್ರೀಕೃಷ್ಣ ಜನ್ಮಾಷ್ಟಮಿಗೆ 88 ಬಗೆಯ ಖಾದ್ಯ ತಯಾರಿಸಿದ ಭಕ್ತೆ
Thursday, September 7, 2023
ಮಂಗಳೂರು: ಶ್ರೀಕೃಷ್ಣ ಜನ್ಮಾಷ್ಟಮಿಗೆ ಉಂಡೆ, ಚಕ್ಕುಲಿ ಸೇರಿ ಬಗೆಬಗೆಯ ಖಾದ್ಯ ತಯಾರಿಸುತ್ತಾರೆ. ಆದರೆ ಒಬ್ಬರು ಅಬ್ಬಬ್ಬಾಂದ್ರೆ 10- 20. ಬಗೆಯ ಖಾದ್ಯ ತಯಾರಿಸಬಹುದು. ಆದರೆ ಮಂಗಳೂರಿನಲ್ಲೊಬ್ಬರು ಶ್ರೀಕೃಷ್ಣನಿಗೆ 88 ಬಗೆಯ ಖಾದ್ಯ ತಯಾರಿಸಿದ್ದಾರೆ. ಇದರ ಫೋಟೊವನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಪದ್ಮನಾಭ್ ಕಾಮತ್ ಟ್ವೀಟ್ ಮಾಡಿದ್ದಾರೆ.
ಶ್ರೀಕೃಷ್ಣಜನ್ಮಾಷ್ಟಮಿಯ ದಿನ ತಮ್ಮ ಪೇಷೆಂಟ್ ಒಬ್ಬರು ತಯಾರಿಸಿದ 88 ಬಗೆಯ ಖಾದ್ಯ ಎಂದು ಅದರ ಫೋಟೊವನ್ನು ಎಕ್ಸ್ ( ಟ್ವಿಟರ್) ನಲ್ಲಿ ಹಾಕಿದ್ದಾರೆ. ಅವರು ಮತ್ತು ಅವರಿಗೆ ಶ್ರೀಕೃಷ್ಣನ ಮೇಲಿರುವ ಭಕ್ತಿಯ ಬಗ್ಗೆ ಹೆಮ್ಮೆಯಿದೆ. ಅವರು ನನ್ನ ಬಳಿ ಚಿಕಿತ್ಸೆ ಪಡೆಯುತ್ತಿರುವವರು. ಈ ಹಿಂದಿನ ಅವರದ್ದೇ ದಾಖಲೆಯನ್ನು ಮತ್ತೊಮ್ಮೆ ಮುರಿದಿದ್ದಾರೆ. ಗೋಕುಲಾಷ್ಟಮಿ ಹಿನ್ನೆಲೆ ಅವರು ಸೆ.6ರಂದು ರಾತ್ರಿ 88 ಬಗೆ ಬಗೆಯ ಖಾದ್ಯಗಳನ್ನು ತಯಾರಿಸಿದ್ದಾರೆ ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಈ ಟ್ವಿಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.