ಆಳ್ವಾಸ್‌ನ ಐವರು ವಿದ್ಯಾರ್ಥಿಗಳು ಎಲ್‌ಎಸ್‌ಇಜಿಗೆ ಆಯ್ಕೆ
ಆಳ್ವಾಸ್‌ನ ಐವರು ವಿದ್ಯಾರ್ಥಿಗಳು ಎಲ್‌ಎಸ್‌ಇಜಿಗೆ ಆಯ್ಕೆ
ಮೂಡಬಿದಿರೆಯ ಪ್ರತಿಷ್ಠಿತ ಆಳ್ವಾಸ್ ಶಿಕ್ಷಣ ಸಂಸ್ಥೆ ಮತ್ತೊಂದು ಹೆಗ್ಗಳಿಕಗೆ ಪಾತ್ರವಾಗಿದೆ. ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನ ಐವರು ವಿದ್ಯಾರ್ಥಿಗಳು ಲಂಡನ್ ಸ್ಟಾಕ್ ಎಕ್ಸ್‌ಚೇಂಜ್ ಗ್ರೂಪ್ (LSEG) ಗ್ರ್ಯಾಜುವೇಟ್ ಎಂಜಿನಿಯರ್ ಟ್ರೈನಿ ಹುದ್ದೆಗೆ ತಲಾ 11.5 ಲಕ್ಷ ಪ್ಯಾಕೇಜ್‌ನೊಂದಿಗೆ ಆಯ್ಕೆಯಾಗಿದ್ದಾರೆ.
ಮಿಜಾರಿನಲ್ಲಿ ಇರುವ ಎಂಜಿನಿಯರಿಂಗ್ ಕಾಲೇಜಿನಲ್ಲಿ ಇತ್ತೀಚಿನ ಕ್ಯಾಂಪಸ್ ಸಂದರ್ಶನ ನಡೆದಿತ್ತು. ಕೊನೆಯ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಗಳಾದ ವಿನಯ್ ಪಿ. ಹುಂಡೇಕರ್, ಖುಷಿ ವಿ.ಕೆ., ಜೇಮ್ಸ್ ಜೋಸೆಫ್, ಶ್ವೇತಾ ಸಿ. (ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್), ಶ್ವೇತಾ ಶರ್ಮಾ (ಇನ್ಫರ್ಮೇಷನ್ ಸೈನ್ಸ್ ಆಂಡ್ ಎಂಜಿನಿಯರಿಂಗ್) ಉನ್ನತ ಪ್ಯಾಕೇಜ್ ಪಡೆದ ವಿದ್ಯಾರ್ಥಿಗಳಾಗಿದ್ದಾರೆ.
ಆಳ್ವಾಸ್ ಶಿಕ್ಷಣ ಸಂಸ್ಥೆಗಳಲ್ಲಿ ಒಂದು ಶೈಕ್ಷಣಿಕ ವರ್ಷದಲ್ಲಿ ಸರಾಸರಿ 400ಕ್ಕೂ ಅಧಿಕ ಕಂಪೆನಿಗಳು ನೇಮಕಾತಿಗಾಗಿ ಕ್ಯಾಂಪಸ್‌ಗೆ ಆಗಮಿಸುತ್ತಿವೆ.
ಇಲ್ಲಿ ವಿದ್ಯಾಭ್ಯಾಸ ಮಾಡುವ ಶೇ. 90 ವಿದ್ಯಾರ್ಥಿಗಳು ಕ್ಯಾಂಪಸ್ ನೇಮಕಾತಿಯ ಮೂಲಕವೇ ಉದ್ಯೋಗ ಪಡೆಯುತ್ತಿದ್ದಾರೆ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಂ. ಮೋಹನ ಆಳ್ವ ಮತ್ತು ಟ್ರಸ್ಟಿ ವಿವೇಕ್ ಆಳ್ವ ಅವರು ತಿಳಿಸಿದ್ದು, ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.