ನಟಿ ಅಪರ್ಣಾ ನಾಯರ್ ಸಾವಿಗೆ ಬಿಗ್ ಟ್ವಿಸ್ಟ್ : ನಾದಿನಿಯೊಂದಿಗೆ ಪತಿಯ ಅಕ್ರಮ ಸಂಬಂಧದ ರಹಸ್ಯ ಬಯಲು
Sunday, September 10, 2023
ತಿರುವನಂತಪುರಂ: ಮಲಯಾಲಂ ನಟಿ ಅಪರ್ಣಾ ನಾಯರ್ ಆತ್ಮಹತ್ಯೆ ಪ್ರಕರಣದಲ್ಲಿ ಬೇರೆ ಬೇರೆ ಬೆಳವಣಿಗೆಗಳು ನಡೆಯುತ್ತಿದೆ. ಆತ್ಮಹತ್ಯೆ ಮಾಡಿದ ಮೊದಲಿಗೆ ಆಕೆ ಪತಿ ಸಂಜಿತ್ ಕುಡಿತದ ಚಟಕ್ಕೆ ಬೇಸತ್ತು ಸಾವಿಗೆ ಶರಣಾಗಿದ್ದಾಳೆ ಎಂದು ಹೇಳಲಾಗಿತ್ತು. ಆದರೆ ಆ ಬಳಿಕ ಅಪರ್ಣಾ ಆತ್ಮಹತ್ಯೆ ಮುನ್ನ ಮದ್ಯಪಾನ ಮಾಡಿದ್ದಳು ಎಂದು ಪತಿ ಸಂಜಿತ್ ಪೊಲೀಸ್ ಹೇಳಿಕೆಯನ್ನು ತಿಳಿಸಿದ್ದರು. ಇದೀಗ ಮತ್ತೊಂದು ಸ್ಫೋಟಕ ಸಂಗತಿ ಬಯಲಾಗಿದೆ.
ಎರಡು ವರ್ಷಗಳಿಂದ ಸಂಜಿತ್ ಅಪರ್ಣಾ ಸಹೋದರಿಯೊಂದಿಗೆ ಅಂದರೆ ನಾದಿನಿಯೊಂದಿಗೆ ವಿವಾಹೇತರ ಸಂಬಂಧ ಇಟ್ಟುಕೊಂಡಿದ್ದಾನೆ. ಇದು ಅಪರ್ಣಾಗೆ ತಿಳಿದು ಸಂಜಿತ್ ವಿರುದ್ಧ ದೂರು ದಾಖಲಿಸಿದ್ದಳು. ಆದ್ದರಿಂದ ಸಂಜಿತ್ನನ್ನು ಪೊಲೀಸರು ಬಂಧಿಸಿದ್ದರು. ಹೀಗಿದ್ದರೂ ಸಂಜಿತ್ನನ್ನು ಅಪರ್ಣಾ ಸ್ವೀಕರಿಸಿದ್ದಳು.
ಆದರೆ ಜೈಲಿನಿಂದ ಹೊರ ಬಂದ ಸಂಜಿತ್, ಪತ್ನಿ ಅಪರ್ಣಾ ನಾಯರ್ ಮೇಲಿನ ಕೋಪದಿಂದ ಆಕೆಯ ಮೇಲೆ ದ್ವೇಷ ಸಾಧಿಸಲು ಆರಂಭಿಸಿದ್ದಾನೆ. ಮದ್ಯಸೇವನೆ ಮಾಡಿ ಬಂದು ದಿನಂಪ್ರತಿ ಜಗಳವಾಡುತ್ತಿದ್ದ. ಅಲ್ಲದೆ, ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸದಂತೆ ಹಿಂಸೆ ನೀಡುತ್ತಿದ್ದ. ಆದ್ದರಿಂದ ಅಪರ್ಣಾ ನಾಯರ್ ನಟನೆಯನ್ನು ನಿಲ್ಲಿಸಿ ಆಸ್ಪತ್ರೆಯೊಂದರಲ್ಲಿ ಸ್ವಾಗತಕಾರಣಿಯಾಗಿ ಕೆಲಸ ಮಾಡುತ್ತಿದ್ದರು. ಆದರೆ, ಪತಿ ಮಾತ್ರ ಪ್ರತಿದಿನ ಮದ್ಯಸೇವಿಸಿ ಬಂದು ತೊಂದರೆ ಕೊಡುತ್ತಿದ್ದ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಅಪರ್ಣಾ ಸಾವಿಗೆ ಸಂಜಿತ್ ಕಾರಣ ಎಂದು ಅಪರ್ಣಾ ತಾಯಿ ದೂರಿದ್ದಾರೆ.
ಕೇರಳದ ಕರಮಾನ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಅಪರ್ಣಾ ಪತಿ ಸಂಜಿತ್ ಹೇಳಿಕೆ ನೀಡಿದ್ದಾರೆ. ಘಟನೆ ನಡೆಯುವ ದಿನ ಅಪರ್ಣಾ ಮದ್ಯಸೇವಿಸಿದ್ದಳು.ಇದೇ ವಿಚಾರಣಕ್ಕೆ ತನ್ನ ಹಾಗೂ ಆಕೆಯ ನಡುವೆ ಜಗಳ ನಡೆದಿತ್ತು. ರಾತ್ರಿ ಓಣಂ ಆಚರಣೆ ನೋಡಲು ಹೋಗಲು ನಿರ್ಧರಿಸಿದ್ದರು. ಆದರೆ, ಅಪರ್ಣಾ ಮದ್ಯ ಸೇವಿಸಿದ್ದರಿಂದ ಸಂಜಿತ್ ಆಕೆಯನ್ನು ಪ್ರಶ್ನಿಸಿದಾಗ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಇದರಿಂದ ಸಂಜಿತ್ ಕೋಪಗೊಂಡು ತನ್ನ ಪುತ್ರಿಯನ್ನು ಕರೆದುಕೊಂಡು ಮನೆಯಿಂದ ಹೊರ ಹೋಗಿದ್ದಾನೆ. ಆತ ಮೆಟ್ಟುಕಾಡಕ್ಕೆ ತೆರಳಿದಾಗ ಫೋನ್ ಮಾಡಿದ ಅಪರ್ಣಾ ನಾಯರ್ ಆತ್ಮಹತ್ಯೆಗೆ ಯತ್ನಿಸುತ್ತಿರುವುದಾಗಿ ಹೇಳಿದ್ದಾಳೆ. ಇದನ್ನು ಕೇಳಿ ತಕ್ಷಣ ಸಂಜಿತ್ ಮನೆಗೆ ಧಾವಿಸಿದ್ದು, ಅಷ್ಟರಲ್ಲಾಗಲೇ ಆಕೆ ಮೃತಪಟ್ಟಿದ್ದಳು ಎಂದು ಸಂಜಿತ್ ಹೇಳಿದ್ದಾನೆ.
ಸಾವಿಗೂ ಕೆಲವೇ ಗಂಟೆಗಳಿಗೂ ಮುನ್ನ ಅಪರ್ಣಾ, ತನ್ನ ತಾಯಿಗೆ ವಿಡಿಯೋ ಕಾಲ್ ಮಾಡಿ, ಕುಟುಂಬದಲ್ಲಿನ ಸಮಸ್ಯೆಗಳ ಬಗ್ಗೆ ಮಾತನಾಡಿದ್ದರು. ಗಂಡನ ಕುಡಿತದ ಚಟದಿಂದ ಮಾನಸಿಕ ತೊಂದರೆಗೆ ಒಳಗಾಗಿದ್ದಳು. ಆದಷ್ಟು ಬೇಗ ಈ ಸ್ಥಳವನ್ನು ತೊರೆಯುತ್ತೇನೆ ಎಂದು ಹೇಳಿದ್ದಳು. ಫೋನ್ನಲ್ಲಿ ಮಾತನಾಡುವಾಗ ಅಪರ್ಣಾ ಅಳುತ್ತಿದ್ದಳು ಎಂದು ಆಕೆಯ ತಾಯಿ ತಿಳಿಸಿದ್ದರು.