ಮೇಕೆಯೊಂದಿಗೆ ಅಸಹಜ ಲೈಂಗಿಕ ಕ್ರಿಯೆ: ಕಾಮುಕನ ಸೆರೆ
Monday, September 4, 2023
ಚನ್ನಪಟ್ಟಣ: ಮೇಕೆಯ ಮೇಲೆ ಅಸಹಜ ಲೈಂಗಿಕ ಕ್ರಿಯೆ ನಡೆಸಿದ ಕಾಮುಕನನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ಇಂದಿರಾ ಕಾಟೇಜ್ ಬಡಾವಣೆಯ ನಿವಾಸಿ, ಆಟೊ ಚಾಲಕ ರೂಹಿದ್ ಅಹಮ್ಮದ್ ಬಂಧಿತ ಆರೋಪಿ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಬಡಾವಣೆಯಲ್ಲಿನ ನಿರ್ಮಾಣ ಹಂತದ ಕಟ್ಟಡದ ಹಿಂಭಾಗ ಅಹಮ್ಮದ್ ಮೇಕೆ ಹಿಡಿದುಕೊಂಡು ಹೋಗುತ್ತಿದ್ದ. ಈ ಬಗ್ಗೆ ಅನುಮಾನ ಬಂದು ಆತನನ್ನು ಜಮೀರ್ ಖಾನ್ ಎಂಬಾತ ಹಿಂಬಾಲಿಸಿ ನೋಡಿದಾಗ ಮೇಕೆಯೊಂದಿಗೆ ಅಸಹಜ ಲೈಂಗಿಕ ಕ್ರಿಯೆ ನಡೆಸುತ್ತಾ, ಅದಕ್ಕೆ ಹಿಂಸೆ ನೀಡುತ್ತಿದ್ದ.
ಇದನ್ನು ಮೊಬೈಲ್ ನಲ್ಲಿ ಸೆರೆ ಹಿಡಿದು, ಕಾನೂನು ಕ್ರಮ ಜರುಗಿಸುವಂತೆ ಪೊಲೀಸರಿಗೆ ಜಮೀರ್ ಖಾನ್ ದೂರು ನೀಡಿದ್ದರು. ಪಟ್ಟಣದಾದ್ಯಂತ ಈ ವಿಚಾರ ಗೊತ್ತಾಗುತ್ತಿದ್ದಂತೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಲಾಗಿದೆ.