BANTWALA ; ತಂಗಿ ಜೊತೆ ಮಲಗಿದ್ದ ಯುವತಿಯನ್ನು ಕಿಟಕಿಯಲ್ಲಿ ಇಣುಕಿ ನೋಡಿ ಲೈಂಗಿಕ ಕಿರುಕುಳ
Thursday, September 21, 2023
ಮಂಗಳೂರು: ತಂಗಿಯರ ಜೊತೆಗೆ ಮಲಗಿದ್ದ ಯುವತಿಯನ್ನು ಕಿಟಕಿಯಲ್ಲಿ ಇಣುಕಿ ನೋಡಿ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಬುಧವಾರ ( ಸೆ.20) ರಾತ್ರಿ ಸಂತ್ರಸ್ಥ ಯುವತಿಯು ತನ್ನ ಮನೆಯಲ್ಲಿ ಊಟ ಮುಗಿಸಿ, ಮನೆಯ ಕೋಣೆಯಲ್ಲಿ ತನ್ನ ತಂಗಿಯರೊಂದಿಗೆ ಮಲಗಿದ್ದಾಗ ಈ ಘಟನೆ ನಡೆದಿದೆ. ಕೋಣೆಯ ಕಿಟಕಿಯಿಂದ ಪ್ರಕರಣದ ಆರೋಪಿಯಾದ ವಿಶ್ವನಾಥ ಎಂಬವನು ಲೈಂಗಿಕ ಕಿರುಕುಳ ನೀಡುವ ಉದ್ದೇಶದಿಂದ ಕಿಟಕಿಯಿಂದ ಇಣುಕಿ ನೋಡಿದ್ದಾನೆ ಎಂದು ಯುವತಿ ದೂರು ನೀಡಿದ್ದಾಳೆ. ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ