ನವರಾತ್ರಿ ವೇಳೆ ಈ ಮಂತ್ರ ಪಠಿಸುವುದರಿಂದ ಸಿಗಲಿದೆ ನಿಮ್ಮ ಎಲ್ಲ ಸಮಸ್ಯೆಗಳಿಗೆ ಪರಿಹಾರ..!
Friday, September 29, 2023
ನವರಾತ್ರಿ ವೇಳೆ ಈ ಶಕ್ತಿಯುತ ಮಂತ್ರ ಪಠಿಸಿದ್ರೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರ
ಪ್ರತಿನಿತ್ಯ ದುರ್ಗಾ ಸಪ್ತಶತಿ ಪಾರಾಯಣ ಮಾಡಿದ್ರೆ ಹಲವಾರು ಪ್ರಯೋಜನ ಪಡೆಯುತ್ತೀರಿ
ದುರ್ಗಾ ಸಪ್ತಶತಿಯನ್ನು ಪಠಿಸುವುದರಿಂದ ನೀವು ಎಲ್ಲಾ ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತೀರಿ
ದುರ್ಗಾ ಸಪ್ತಶತಿಯನ್ನು ಪಠಿಸುವ ಭಕ್ತನಿಗೆ ತಾಯಿಯು ಆಶೀರ್ವಾದ ನೀಡುತ್ತಾಳೆ
ದುರ್ಗಾ ಸಪ್ತಶತಿ ಪಠಣದ ಪ್ರಯೋಜನಗಳು: ಪಿತೃಪಕ್ಷದ ನಂತರ ಅಂದರೆ ಅಕ್ಟೋಬರ್ 15ರ ಮರುದಿನ ಅಶ್ವಿನ ಶುಕ್ಲಪಕ್ಷ ಪ್ರತಿಪದದಿಂದ ಶಾರದೀಯ ನವರಾತ್ರಿ ಪ್ರಾರಂಭವಾಗುತ್ತದೆ. ನವರಾತ್ರಿಯಲ್ಲಿ ಮಾತೃದೇವತೆಯ 9 ವಿಭಿನ್ನ ರೂಪಗಳನ್ನು ಪೂಜಿಸಲಾಗುತ್ತದೆ. ತಾಯಿ ದುರ್ಗಾದೇವಿ 9 ಅಥವಾ ಅದಕ್ಕಿಂತ ಹೆಚ್ಚು ರೂಪಗಳು ಇರಬಹುದು, ಆದರೆ ತಾಯಿ ಒಂದೇ ಮತ್ತು ಅವಳು ಬೇರೆಯಲ್ಲ. ‘ಈ ಜಗತ್ತಿನಲ್ಲಿ ನಾನೊಬ್ಬಳೇ ಇದ್ದೇನೆ, ಬೇರೆ ಯಾರೂ ಇಲ್ಲ!’ವೆಂದು ಸ್ವತಃ ತಾಯಿಯೇ ಹೇಳಿದ್ದಾಳೆ.
ನವರಾತ್ರಿಯ ಸಮಯದಲ್ಲಿ ಮಾತೃ ದೇವಿಯ ವಿವಿಧ ರೂಪಗಳನ್ನು ಪೂಜಿಸುವಾಗ ದುರ್ಗಾ ಸಪ್ತಶತಿಯನ್ನು ಪಠಿಸಲಾಗುತ್ತದೆ. ದುರ್ಗಾ ಸಪ್ತಶತಿಯನ್ನು ಪಠಿಸುವ ಭಕ್ತನಿಗೆ ತಾಯಿಯು ಆಶೀರ್ವಾದ ನೀಡುತ್ತಾಳೆ.