ವಿವಾಹವಾಗಿ ಮೂರು ವರ್ಷಗಳ ಬಳಿಕ ದಂಪತಿಗೆ ತಿಳಿಯಿತು ನಿಜ ಸತ್ಯ: ಮುಂದೇನಾಯ್ತು ಗೊತ್ತೇ?
Wednesday, September 20, 2023
ಅಮೇರಿಕಾ: ಮದುವೆಯಾದ ಬಳಿಕ ತಾವಿಬ್ಬರೂ ಸೋದರ ಸಂಬಂಧಿಗಳಾಗಬೇಕೆಂಬ ವಿಚಾರ ದಂಪತಿಗೆ ತಿಳಿದುಬರುವ ಅನಿರೀಕ್ಷಿತ, ಘಟನೆಗಳು ಅಪರೂಪಕ್ಕೊಮ್ಮೆ ವರದಿಯಾಗುತ್ತದೆ. ಇದೀಗ ಮೂರು ವರ್ಷಗಳ ಬಳಿಕ ಯುವ ದಂಪತಿಗಳಿಗೂ ಇಂತಹದೇ ಆಘಾತಕಾರಿ ಪ್ರಸಂಗ ಎದುರಾಗಿದೆ. ವೈದ್ಯಕೀಯ ತಪಾಸಣೆ ಬಳಿಕ ತಾವಿಬ್ಬರೂ ಸೋದರಸಂಬಂಧಿಗಳು ಎನ್ನುವ ವಿಚಾರ ಅವರಿಗೆ ತಿಳಿದಿದೆ.
ಯುಎಸ್ಎಯ ಉತಾಹ್‌ನ ದಂಪತಿಯಾದ ಟೈಲೀ ಮತ್ತು ನಿಕ್ ವಾಟರ್ಸ್ ಸ್ವತಃ ಈ ವಿಚಾರ ತಿಳಿದು ಬೆರಗಾಗಿದ್ದಾರೆ. ಇಬ್ಬರೂ ಇದನ್ನು ಟಿಕ್ಟಾಕ್ನಲ್ಲಿ ಬಹಿರಂಗಪಡಿಸಿ, ತಮ್ಮ ಸಂಬಂಧದ ಬಗ್ಗೆ ತಿಳಿಸಿದ್ದಾರೆ. ಇಬ್ಬರೂ ಜೊತೆಯಾಗಿ ಕುಳಿತು ಈ ವೀಡಿಯೋ ಬಿಡುಗಡೆ ಮಾಡಿದ್ದಾರೆ. “ಮದುವೆಯಾಗಿ 3 ವರ್ಷಗಳ ಬಳಿಕ ನಾವು ಸೋದರಸಂಬಂಧಿಗಳೆಂದು ಗೊತ್ತಾಯ್ತು” ಎಂದು ತಿಳಿಸಿದ್ದಾರೆ. ಈ ವಿಚಾರ ಬಹಿರಂಗಪಡಿಸುವಾಗ ಪರಸ್ಪರ ಲಿಪ್-ಲಾಕ್ ಮಾಡುವುದನ್ನು ಕಾಣಬಹುದು.
ಈ ಅನಿರೀಕ್ಷಿತ ಘಟನೆಯ ಹೊರತಾಗಿಯೂ ಇಬ್ಬರೂ ತಮ್ಮ ಮದುವೆಯ ಬಗ್ಗೆ ಯಾವುದೇ ತಕರಾರು ಹೊಂದಿಲ್ಲ. ಬೇರ್ಪಡುವ ಬದಲು ಇಬ್ಬರೂ ತಮ್ಮ ಸಂಬಂಧಕ್ಕೆ ಬದ್ಧರಾಗಲು ನಿರ್ಧರಿಸಿದ್ದಾರೆ. ಮತ್ತೊಂದು ವಿಡಿಯೋದಲ್ಲಿ, ಅವರು ಜನ್ಮದಿನದ ಕುರಿತಾಗಿಯೂ ಬಹಿರಂಗಪಡಿಸಿದರು. ಆದರೆ ಈ ವಿಚಾರ ಹೇಗೆ ತಿಳಿಯಿತು ಎಂಬ ಬಗ್ಗೆ ದಂಪತಿಗಳು ಗುಟ್ಟು ಬಿಟ್ಟುಕೊಟ್ಟಿಲ್ಲ.
ಇದಕ್ಕೂ ಮೊದಲು, ಈ ವರ್ಷ ಯುಎಸ್ಎಯ ಕೊಲೊರಾಡೋದ ದಂಪತಿಗಳಿಗೆ 17 ವರ್ಷಗಳ ನಂತರ ತಾವಿಬ್ಬರೂ ಸೋದರಸಂಬಂಧಿ ಎಂಬ ವಿಚಾರ ತಿಳಿಯಿತು. ಅಷ್ಟರೊಳಗೆ ಅವರು ಮೂರು ಮಕ್ಕಳಿಗೆ ಪೋಷಕರಾಗಿದ್ದರು. ಸೆಲಿನಾ ಮತ್ತು ಜೋಸೆಫ್ ಕ್ವಿನೋನ್ಸ್ ಡಿಎನ್ಎ ಪರೀಕ್ಷೆಯ ಮೂಲಕ ಈ ವಿಚಾರ ರಿವೀಲ್ ಆಯಿತು ಎಂದು ತಿಳಿಸಿದರು. ತದನಂತರ ಇಬ್ಬರೂ ಬೇರಾಗಲೂ ನಿರ್ಧರಿಸಿದರೂ ತಮ್ಮ ಮೂರು ಮಕ್ಕಳ ಯೋಗಕ್ಷೇಮಕ್ಕಾಗಿ ಒಟ್ಟಿಗೆ ಇರಲು ನಿರ್ಧರಿಸಿದರು.