ಕಾಡುಹಂದಿಗಾಗಿ ಇಟ್ಟಿದ್ದ ವಿದ್ಯುತ್ ಬಲೆ ಸ್ಪರ್ಶಿಸಿ ಯುವಕರಿಬ್ಬರು ಮೃತ್ಯು
Thursday, September 28, 2023
ಪಾಲಕ್ಕಾಡ್: ಕಾಡು ಹಂದಿಗಾಗಿ ಇಟ್ಟಿರುವ ವಿದ್ಯುತ್ ಬಲೆಯನ್ನು ಸ್ಪರ್ಶಿಸಿ ಯುವಕರಿಬ್ಬರು ಮೃತಪಟ್ಟಿದ್ದು, ಜಮೀನಿನ ಮಾಲಕ ಇವರ ಮೃತದೇಹಗಳನ್ನು ತನ್ನ ಜಮೀನಿನಲ್ಲೇ ಹೂತ ಘಟನೆ ನಡೆದಿದೆ.
ಮಂಗಳವಾರ ಕೊಡುಂಬುವಿನ ಅಂಬಲಪರಂಬು ಗ್ರಾಮದ ಪಲ್ಲೀರಿ ಕಾಲನಿಯಲ್ಲಿ ಇಬ್ಬರು ಯುವಕರ ಮೃತದೇಹ ಜಮೀನೊಂದರಲ್ಲಿ ಪತ್ತೆಯಾಗಿತ್ತು. ಈ ಕುರಿತು ಜಮೀನು ಮಾಲಕ ಕಾಡು ಹಂದಿಗೆ ತಾನಿಟ್ಟ ಬಲೆಯಿಂದಲೇ ಇವರು ಮೃತಪಟ್ಟಿದ್ದಾರೆಂದು ವಿಚಾರಣೆ ವೇಳೆ ತಪೊಪ್ಪಿಕೊಂಡಿದ್ದಾನೆ. ಯುವಕರಿಬ್ಬರ ಮೃತದೇಹ ಕಂಡು ಗಾಬರಿಯಿಂದ ತಾನು ದಫನ ಮಾಡಿದೆ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.
ಮೃತ ಯುವಕರ ದೇಹಗಳು ಪತ್ತೆಯಾದ ಜಮೀನಿನ ಮಾಲಕ ಅಂಬಲಪರಂಬು ವೀಟ್ಟಿಲ್ ಅನಂತನ್ (52) ಇದೀಗ ಪೊಲೀಸರ ವಶದಲ್ಲಿದ್ದಾನೆ. ಆ ಯುವಕರ ಸಾವಿಗೆ ಮತ್ತೇನಾದರೂ ಕಾರಣವಿತ್ತೆ ಎಂಬ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.