ಸಹಕಾರಿ ಸಂಸ್ಥೆಗೆ ನಕಲಿ ದಾಖಲೆ ಸೃಷ್ಟಿಸಿ ವಂಚನೆ: ಆರೋಪಿ ವಿರುದ್ಧ ದೂರು ದಾಖಲು!
ಸಹಕಾರಿ ಸಂಸ್ಥೆಗೆ ನಕಲಿ ದಾಖಲೆ ಸೃಷ್ಟಿಸಿ ವಂಚನೆ: ಆರೋಪಿ ವಿರುದ್ಧ ದೂರು ದಾಖಲು
ಮಂಗಳೂರಿನ ಸಹಕಾರಿ ಸಂಸ್ಥೆಯೊಂದಕ್ಕೆ ನಕಲಿ ದಾಖಲೆ ಸೃಷ್ಟಿಸಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ತಮ್ಮ ಜೆಸಿಬಿ ವಾಹನದ ಆರ್‌ಸಿ ದಾಖಲೆ ಎಂದು ಸಹಕಾರಿ ಸಂಸ್ಥೆಯ ಅಧಿಕಾರಿಗಳನ್ನು ನಂಬಿಸಿ ಆರೋಪಿ ಸಾಲ ಪಡೆದಿದ್ದ. ಆದರೆ, ಆ ಆರ್‌ಸಿ ದಾಖಲೆಗಳು ಬೇರೊಂದು ಕಾರಿಗೆ ಸಂಬಂಧಿಸಿದ ದಾಖಲೆಗಳಾಗಿತ್ತು.
ನಕಲಿ ದಾಖಲೆ ಸೃಷ್ಟಿಸಿ ಹಾಜರುಪಡಿಸಿ ಸಾಲ ಪಡೆದು ಸಹಕಾರಿ ಸಂಸ್ಥೆಗೆ ವಂಚಿಸಿರುವ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಮಂಗಳೂರಿನ ಪದವು ಗ್ರಾಮದ ಪ್ರೀತಂ ಎಂಬವ 2018ರ ಜನವರಿ 20 ತಾರೀಕಿನಂದು ನೀರುಮಾರ್ಗದ ಸಹಕಾರಿ ಸಂಸ್ಥೆಯಲ್ಲಿ ತಮ್ಮ ವಾಹನದ ಮೇಲೆ ಸಾಲ ಪಡೆದುಕೊಳ್ಳಲು ಜೆಸಿಬಿ ವಾಹನದ ದಾಖಲೆಗಳನ್ನು ಹಾಜರುಪಡಿಸಿದ್ದ.
ಈ ನಕಲಿ ದಾಖಲೆ ದಾಖಲೆ ಸೃಷ್ಟಿಸಿ ಎಂಟು ಲಕ್ಷ ರೂ. ಸಾಲ ಪಡೆದಿದ್ದ. ರೂ. 13,400 ಮಾಸಿಕ ಕಂತುಗಳನ್ನು ಆತ ಏಳು ತಿಂಗಳುಗಳ ಕಾಲ ಮರು ಪಾವತಿ ಮಾಡಿದ್ದ. ಉಳಿದ ಸಾಲದ ಕಂತುಗಳನ್ನು ಮರುಪಾವತಿಸದೆ ಇದ್ದಾಗ ಸಹಕಾರಿ ಸಂಘದವರು ವಾಹನದ ದಾಖಲೆಗಳನ್ನು ಆರ್‌ಟಿಒ ಕಚೇರಿಯಲ್ಲಿ ಪರಿಶೀಲಿಸಿದರು.
ಆಗ ಆರೋಪಿ ಪ್ರೀತಂ ಸಾಲ ಪಡೆಯುವ ಸಂದರ್ಭದಲ್ಲಿ ಹಣಕಾಸು ಸಂಸ್ಥೆಗೆ JCB ವಾಹನದ ದಾಖಲೆಗಳೆಂದು ನಂಬಿಸಿ ಯಾವುದೋ ಇಂಡಿಕಾ ಕಾರಿನ ದಾಖಲೆ ಹಾಜರುಪಡಿಸಿರುವ ವಿಷಯ ಬಯಲಾಗಿದೆ.