ಕಾಫಿ ಮಾಡುತ್ತಿರುವಾಗಲೇ ದಂಪತಿಯನ್ನು ಕಾದಿತ್ತು ಭಯಾನಕ ಅವಘಡ
Saturday, September 23, 2023
ಕೋಲಾರ: ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ಯುವ ದಂಪತಿ ಗಂಭೀರವಾಗಿ ಗಾಯಗೊಂಡು ದಾರುಣವಾಗಿ ಮೃತಪಟ್ಟಿರುವ ಘಟನೆ ಕೋಲಾರದಲ್ಲಿ ಸಂಭವಿಸಿದೆ.
ಕೋಲಾರದ ಮಧುಸೂದನ್ ಹಾಗೂ ನಂದಿನಿ ದುರ್ಘಟನೆಯಲ್ಲಿ ಸಾವಿಗೀಡಾದ ದಂಪತಿ.
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕುಪ್ಪಡಹಳ್ಳಿ ಗ್ರಾಮದಲ್ಲಿ ಸೆ.16ರಂದು ಈ ದುರ್ಘಟನೆ ಸಂಭವಿಸಿತ್ತು. ಕೋಲಾರ ತಾಲೂಕಿನ ಮಣಿಘಟ್ಟ ರಸ್ತೆಯಲ್ಲಿರುವ ಮಧುಸೂದನ್ ಅವರ ತೋಟದ ಮನೆಯಲ್ಲಿ ಈ ಅವಘಡ ಸಂಭವಿಸಿತ್ತು.
ಕಾಫಿ ಮಾಡುವ ವೇಳೆ ಗ್ಯಾಸ್ ಸೋರಿಕೆಯಾಗಿ ಸಿಲಿಂಡರ್ ಸ್ಪೋಟಗೊಂಡು ಬೆಂಕಿ ಅವಘಡವಾಗಿದೆ. ಪರಿಣಾಮ ದಂಪತಿ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ದಂಪತಿ ಇಬ್ಬರೂ ಸಾವಿಗೀಡಾಗಿದ್ದಾರೆ.