ಮೂರು ಮದುವೆಯಾದ ಕಿರಾತಕ ಪತಿಗೆ ಪತ್ನಿಯ ಮೇಲೆ ಶಂಕೆ : ಆಕೆಯ ಖಾಸಗಿ ಅಂಗವನ್ನೇ ಸುಟ್ಟು ಹಾಕಿದ
Tuesday, September 12, 2023
ಬಿಹಾರ: ಪತ್ನಿಗೆ ಅನೈತಿಕ ಸಂಬಂಧವಿದೆ ಎಂದು ಶಂಕಿಸಿರುವ ಕಿರಾತಕ ಪತಿಯೊಬ್ಬ ಆಕೆಯ ಖಾಸಗಿ ಭಾಗವನ್ನೇ ಸುಟ್ಟು ಹಾಕಿರುವ ಘಟನೆ ಬಿಹಾರದ ಕತಿಹಾರ್ನಲ್ಲಿ ನಡೆದಿದೆ.
ಬರ್ಸೋಯಿಯ ರಘುನಾಥಪುರ ಹಳ್ಳಿಯ ನಿವಾಸಿ ಡೋಲೋದೇವಿ ಸಂತ್ರಸ್ತ ಮಹಿಳೆ. ರಾಮಬಾಬು ಪಾಸ್ವಾನ್ ಪತ್ನಿಯ ಖಾಸಗಿ ಅಂಗಕ್ಕೆ ಬೆಂಕಿ ಹಚ್ಚಿದ ಕಿರಾತಕ ಪತಿ. ಆರೋಪಿಗೆ ಈಗಾಗಲೇ ಮೂರು ವಿವಾಹಯಾಗಿದೆ. ಆದರೆ ತನ್ನ ಪತ್ನಿಗೆ ಬೇರೆಯವರೊಂದಿಗೆ ಅಕ್ರಮ ಸಂಬಂಧವಿದೆ ಎಂಬ ಶಂಕೆ ಪತಿಗಿತ್ತು. ಆದ್ದರಿಂದ ಆತ ಪತ್ನಿಯ ಖಾಸಗಿ ಅಂಗಗಳಿಗೆ ಬೆಂಕಿ ಹೆಚ್ಚಿ ಸ್ಥಳದಿಂದ ಪರಾರಿಯಾಗಿದ್ದಾನೆ.
ಅಲ್ಲದೆ ಆರೋಪಿ ರಾಮಬಾಬು ಪಾಸ್ವಾನ್ ಗೆ ಮದ್ಯಪಾನ ಮಾಡುವ ಕೆಟ್ಟ ಚಟವಿತ್ತು. ರಾಮಬಾಬು ಪಾಸ್ವಾನ್ ಸೋಮವಾರ ಪತ್ನಿಯೊಂದಿಗೆ ಜಗಳವಾಡಿದ್ದು, ಬಳಿಕ ಮರದ ತುಂಡಿಗೆ ಬಟ್ಟೆ ಕಟ್ಟಿ ಬೆಂಕಿ ಹಚ್ಚಿ ಪತ್ನಿಯ ಖಾಸಗಿ ಅಂಗಗಳನ್ನು ಸುಟ್ಟು ಹಾಕಿದ್ದಾನೆ ಎಂದು ಹೇಳಲಾಗುತ್ತಿದೆ. ಮನೆಯೊಳಗಿಂದ ಕಿರುಚಾಟದ ಶಬ್ದ ಕೇಳಿದಾಗ ನೆರೆಮನೆಯರು ದೌಢಾಯಿಸಿದ್ದಾರೆ. ಅಷ್ಟರಲ್ಲಿ ಆತ ಪರಾರಿಯಾಗಿದ್ದಾನೆ. ತಕ್ಷಣ ಸಂತ್ರಸೆಯನ್ನು ಉಪವಿಭಾಗೀಯ ಆಸ್ಪತ್ರೆಗೆ ಬರ್ಸೋಯಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಸದ್ಯ ಆಕೆಯ ಸ್ಥಿತಿ ಗಂಭೀರವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.