ಪೇರಳೆ ಹಣ್ಣು ತಿನ್ನುವುದರಿಂದ ಯಾವುದೇ ಸೈಡ್ ಎಫೆಕ್ಟ್ ಇಲ್ಲದೆ ತೂಕ ಇಳಿಸಿಕೊಳ್ಳಬಹುದು..!ಹೇಗೆಂದು ಇಲ್ಲಿದೆ ನೋಡಿ!
Friday, September 29, 2023
ಪೇರಳೆ ಹಣ್ಣನ್ನು ತಿನ್ನುವುದರಿಂದ ವಾಕರಿಕೆಯಿಂದ ಹಿಡಿದು ಜೀರ್ಣಕಾರಿ ಸಮಸ್ಯೆಗಳವರೆಗೆ ಎಲ್ಲದ್ದಕ್ಕೂ ಪರಿಹಾರ ಸಿಗುತ್ತದೆ.
ತೂಕ ಇಳಿಕೆಯಲ್ಲಿ ಸಹಕಾರಿ :
ಪೇರಳೆ ಹಣ್ಣನ್ನು ಕೇವಲ ರುಚಿಗಾಗಿ ಮಾತ್ರ ಸೇವಿಸುವುದಲ್ಲ. ಈ ಹಣ್ಣು ಅನೇಕ ಔಷಧೀಯ ಗುಣಗಳನ್ನು ಕೂಡಾ ಹೊಂದಿದೆ. ಇದನ್ನು ತಿನ್ನುವುದರಿಂದ ತೂಕವನ್ನು ಕಳೆದುಕೊಳ್ಳಬಹುದು. ಹೌದು, ಪೇರಳೆಯಲ್ಲಿರುವ ಕೆಲವು ಅಂಶಗಳು ತೂಕ ಇಳಿಕೆಯಲ್ಲೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ಪೇರಳೆ ಹಣ್ಣಿನಲ್ಲಿ ಕ್ಯಾಲೋರಿಗಳು ತುಂಬಾ ಕಡಿಮೆಯಿರುವುದರಿಂದ, ಇದನ್ನು ಸೇವಿಸುವುದರಿಂದ ಹೆಚ್ಚಿನ ಕ್ಯಾಲೊರಿಗಳು ನಮ್ಮ ದೇಹ ಸೇರುವುದಿಲ್ಲ. ಒಂದು ಪೇರಳೆ ಕೇವಲ 37 ರಿಂದ 55 ಕ್ಯಾಲೋರಿಗಳನ್ನು ಹೊಂದಿರುತ್ತದೆ. ಇದಲ್ಲದೆ, ಪೇರಳೆಯನ್ನು ಸೇವಿಸಿದ ನಂತರ ವ್ಯಕ್ತಿಗೆ ಹೆಚ್ಚು ಸಮಯದವರೆಗೆ ಹಸಿವಾಗುವುದಿಲ್ಲ.
ಫೈಬರ್ ಅಂಶ ಹೆಚ್ಚಾಗಿರುತ್ತದೆ :
ಪೇರಳೆ ಫೈಬರ್ ಮತ್ತು ಪ್ರೊಟೀನ್‌ನಲ್ಲಿ ಸಮೃದ್ಧವಾಗಿದೆ. ಈ ಕಾರಣದಿಂದಾಗಿ ಸಂಪೂರ್ಣವಾಗಿ ಜೀರ್ಣಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಆದ್ದರಿಂದ, ಇದನ್ನು ಸೇವಿಸಿದ ವ್ಯಕ್ತಿಗೆ ಬೇಗನೆ ಹಸಿವಾಗುವುದಿಲ್ಲ. ಹಾಗಾಗಿ ಅನಗತ್ಯವಾದ ಅನಾರೋಗ್ಯಕರ ಆಹಾರವನ್ನು ಸೇವಿಸುವುದನ್ನು ತಡೆಯುತ್ತದೆ. ಹೆಚ್ಚಿನ ಫೈಬರ್ ಅಂಶದಿಂದಾಗಿ, ಇದು ದೇಹದ ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ .