ಮುಂಬೈ GSB ಗಣೇಶೋತ್ಸವದಲ್ಲಿ ಪೂಜಾ ಹೆಗ್ಡೆ- ತುಳುವಿನಲ್ಲಿ ಮಾತಾಡಿದ ಚೆಲುವೆ- VIDEO
Friday, September 22, 2023
ಮುಂಬೈ ಕಿಂಗ್ಸ್ ಸರ್ಕಲ್ ಸಮೀಪ ಜಿಎಸ್ ಬಿ ಸೇವಾ ಮಂಡಲದಿಂದ ಪೂಜಿಸಲ್ಪಡುವ 69 ನೇ ಶ್ರೀ ಗಣೇಶೋತ್ಸವದಲ್ಲಿ ಖ್ಯಾತ ನಾಯಕಿ ನಟಿ ಪೂಜಾ ಹೆಗ್ಡೆ ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ತುಳು ಭಾಷೆಯಲ್ಲಿ ಮಾತನಾಡಿದ ಪೂಜಾ ಹೆಗ್ಡೆ, ಜಿಎಸ್ ಬಿ ಸೇವಾ ಮಂಡಲದಲ್ಲಿ ದೇವರನ್ನು ಪ್ರಾರ್ಥಿಸುವುದೇ ದಿವ್ಯ ಅನುಭವ. ಇಲ್ಲಿ ಪ್ರತಿ ವರ್ಷ ಬಂದು ಗಣಪತಿಯ ಆರ್ಶೀವಾದ ಪಡೆಯುತ್ತೇನೆ. ಇದರಿಂದ ಮನಸ್ಸಿಗೆ ತುಂಬಾ ನೆಮ್ಮದಿ ಸಿಗುತ್ತದೆ. ಇಲ್ಲಿ ಬರಲು ಅವಕಾಶ ಸಿಕ್ಕಿರುವುದು ಪುಣ್ಯ. ಇಲ್ಲಿ ಬಹಳ ಶಿಸ್ತುಬದ್ಧವಾಗಿ ಕಾರ್ಯಕ್ರಮ ನಡೆಯುತ್ತದೆ ಎಂದು ಪೂಜಾ ಹೆಗ್ಡೆ ಹೇಳಿದರು.
ಈ ಸಂದರ್ಭದಲ್ಲಿ ಮಂಡಲದ ಪ್ರಮುಖರು, ಗಣ್ಯರು, ಕಾರ್ಯಕರ್ತರು, ಭಕ್ತರು ಉಪಸ್ಥಿತರಿದ್ದರು.