-->
ಜಯಾ ಮಿಸ್ ನನ್ನ ನೆಚ್ಚಿನ ಟೀಚರ್-ಕುಮಾರಿ ಫಲಕ್‌ ನಾಸೀರಆಹಮದ್ ಜಂಗೂಬಾಯಿ

ಜಯಾ ಮಿಸ್ ನನ್ನ ನೆಚ್ಚಿನ ಟೀಚರ್-ಕುಮಾರಿ ಫಲಕ್‌ ನಾಸೀರಆಹಮದ್ ಜಂಗೂಬಾಯಿ


ಶಿಕ್ಷಕ ದಿನಾಚರಣೆಯ ಶುಭಾಷಯಗಳು

ಶಿಕ್ಷಕನೆಂದರೆ ಕಲಿಯಲು ಮತ್ತು ಬೆಳೆಯಲು ಸ್ಪೂರ್ತಿಯನ್ನು ತುಂಬುವವರು, ನಾನು ನನ್ನ ನೆಚ್ಚಿನ ಶಿಕ್ಷಕರ ಕುರಿತು ಅನಿಸಿಕೆಯನ್ನು ನಿಮ್ಮ ಮುಂದೆ ಇಡುತ್ತಿದ್ದೇನೆ. ನಾನು ದಾಂಡೇಲಿ ನಗರದ ಪ್ರಸಿದ್ಧ ಶಾಲೆಯಾದ ಸೆಂಟ್ ಮೈಕಲ್ ಹೈಯರ್ ಪ್ರಾಥಮಿಕ ಶಾಲೆಯ 6 ನೇ ತರಗತಿಯ ವಿದ್ಯಾರ್ಥಿಯಾಗಿದ್ದೇನೆ. ನನ್ನ ಹೆಸರು ಕುಮಾರಿ ಫಲಕ್‌ ನಾಸೀರಅಹಮ್ಮದ್‌ ಜಂಗೂಬಾಯಿ. ನಮ್ಮ ಶಾಲೆಯು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳನ್ನು ಹೊಂದಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿದೆ. ನಮ್ಮ ಶಾಲೆಯಲ್ಲಿ 30 ಕ್ಕೂ ಅಧಿಕ ಶಿಕ್ಷಕರಿದ್ದಾರೆ. ಆ ಎಲ್ಲಾ ಶಿಕ್ಷಕರಲ್ಲಿ ನನ್ನ ತರಗತಿ ಶಿಕ್ಷಕರಾದ ಶ್ರೀಮತಿ ಜಯಾ ಮಿಸ್ ರವರು ನಮಗೆ ಹಿಂದಿ ಮತ್ತು ಇಂಗ್ಲೀಷ್ ವಿಷಯವನ್ನು ಭೋಧಿಸುತ್ತಾರೆ. ಅಲ್ಲದೇ ಅವರು ನನ್ನ ನೆಚ್ಚಿನ ಶಿಕ್ಷಕರು,

ಶ್ರೀಮತಿ ಜಯಾ ಮಿಸ್‌ರವರು ಉನ್ನತ ಚಿಂತನೆ ಮತ್ತು ಸರಳ ಜೀವನವನ್ನು ನಂಬುತ್ತಾರೆ ಆದ್ದರಿಂದ ಯಾವಾಗಲೂ ಅವರು ಸರಳವಾದ ಬಟ್ಟೆಯನ್ನು ಧರಿಸುತ್ತಾರೆ. ಅವರ ಆಚಾರ ವಿಚಾರಗಳು ಎಲ್ಲರಿಗೂ ಇಷ್ಟವಾಗುತ್ತದೆ. ಅವರು ಶಿಸ್ತಿನಲ್ಲಿ ಕಟ್ಟುನಿಟ್ಟಾಗಿದ್ದಾರೆ. ಅವರು ನಮ್ಮನ್ನು ತಮ್ಮ ಸ್ವಂತ ಮಕ್ಕಳಂತೆ ನೋಡಿಕೊಳ್ಳುತ್ತಾರೆ, ಅವರ ಮಾತುಕತೆಗಳು ಆಸಕ್ತಿದಾಯಕ, ಶೈಕ್ಷಣಿಕ ಮತ್ತು ಸಾಹಿತ್ಯಕ ಉಲ್ಲೇಖಿಗಳಿಂದ ತುಂಬಿವೆ, ಅವರು ತರಗತಿಗಳನ್ನು ತೆಗೆದುಕೊಳ್ಳುವಾಗ ತರಗತಿಯಲ್ಲಿ ಸಂಪೂರ್ಣ ಮೌನವಿರುತ್ತದೆ. ಅಲ್ಲದೇ ಅವರು ನಮಗೆ ವಿವಿಧ ಪಠೇತರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಉತ್ತೇಜನ ನೀಡುತ್ತಿರುತ್ತಾರೆ. ಅವರ ವಿದ್ಯಾರ್ಥಿಯಾಗಲು ನಾನು ಅದೃಷ್ಟಶಾಲಿ ಎಂದು ಭಾವಿಸುತ್ತೇನೆ. ಕೊನೆಯದಾಗಿ ನನ್ನ ಗುರುವೃಂದದ ಪಾದಗಳಿಗೆ ನಮಿಸುತ್ತಾ ನನ್ನ ಆನಿಸಿಕೆಗಳಿಗೆ ವಿರಾಮ ನೀಡುತ್ತೇನೆಯೇ ಹೊರತು ನನ್ನ ಆಲೋಚನೆಗಳಿಗಲ್ಲಾ,

ದನ್ಯವಾದಗಳು

ಕುಮಾರಿ ಫಲಕ್‌ ನಾಸೀರಆಹಮದ್ ಜಂಗೂಬಾಯಿ

6 ನೇ ತರಗತಿ ವಿದ್ಯಾರ್ಥಿ

ಸೆಂಟ್ ಮೈಕಲ್ ಹೈಯರ್‌ ಪ್ರಾಥಮಿಕ ಶಾಲೆ, ದಾಂಡೇಲಿ

Ads on article

Advertise in articles 1

advertising articles 2

Advertise under the article