ಪುತ್ರಿಯೊಂದಿಗೆ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ ಬಾಲಿವುಡ್ ಕಿಂಗ್ ಖಾನ್ ಶಾರುಖ್
ತಿರುಪತಿ: ಬಾಲಿವುಡ್ ಕಿಂಗ್ ಖಾನ್ ನಟ ಶಾರುಖ್ ಖಾನ್ ಅವರ 'ಜವಾನ್ʼ ಸಿನಿಮಾ ರಿಲೀಸ್‌ಗೆ ಇನ್ನೆರಡು ದಿನಗಳು ಮಾತ್ರ ಉಳಿದಿದೆ. ಇದೇ ವಾರದಿಂದ ವಿಶ್ವದೆಲ್ಲೆಡೆ 'ಜವಾನ್ʼ ಆರ್ಭಟ ಶುರುವಾಗಲಿದೆ.
ಅಟ್ಲಿ ನಿರ್ದೇಶನದ 'ಜವಾನ್ʼ ಸಿನಿಮಾ ಟ್ರೇಲರ್, ಹಾಡುಗಳಿಂದ ಈಗಾಗಲೇ ಗಮನ ಸೆಳೆದಿದೆ. ಶಾರುಖ್ ಖಾನ್ 'ಜವಾನ್' ಲುಕ್ ನಲ್ಲಿ ಮಿಂಚಿರುವುದನ್ನು ನೋಡಲು ಪ್ರೇಕ್ಷಕರು ತುದಿಗಾಲಲ್ಲಿ ಕಾಯುತ್ತಿದ್ದಾರೆ. ʼಪಠಾಣ್ʼ ಬಳಿಕ ಮತ್ತೆ ಶಾರುಖ್ ಖಾನ್ ಬಿಗ್ ಸ್ಕ್ರೀನ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರು ಬ್ಯಾಕ್ ಟು ಬ್ಯಾಕ್ ಹಿಟ್ ನಿರೀಕ್ಷೆಯಲ್ಲಿ ಇದ್ದಾರೆ. 'ಜವಾನ್ʼ ಸಿನಿಮಾದ ಪ್ರಚಾರ ಜೋರಾಗಿ ನಡೆಯುತ್ತಿದೆ. ಇನ್ನೊಂದೆಡೆ ಶಾರುಖ್ ಖಾನ್ ಸೇರಿದಂತೆ ಸಿನಿಮಾ ತಂಡ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದೆ. ಇತ್ತೀಚೆಗೆ ಶಾರುಖ್ ಖಾನ್ ವೈಷ್ಣೋದೇವಿ ದರ್ಶನ ಪಡೆದಿದ್ದರು. ಇದೀಗ ಮತ್ತೊಂದು ಪವಿತ್ರ ದೇಗುಲಕ್ಕೆ ಭೇಟಿ ನೀಡಿದ್ದಾರೆ.
ಶಾರುಖ್ ಖಾನ್ ತಮ್ಮ ಪುತ್ರಿ ಸುಹಾನಾ ಖಾನ್‌ರೊಂದಿಗೆ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ವೇಳೆ ಶಾರುಖ್ ರೊಂದಿಗೆ ಅವರ ಮ್ಯಾನೇಜರ್ ಪೂಜಾ ದದ್ಲಾನಿ ಕೂಡ ಇದ್ದರು.