ಮೆಟ್ರೋದಲ್ಲಿಯೇ ಕಾಮಾಂಧನಿಂದ ಹಸ್ತಮೈಥುನ : ಅಪ್ರಾಪ್ತೆಯ ಮೇಲೆಯೇ ಸ್ಖಲನ
Friday, September 1, 2023
ಹೊಸದೆಹಲಿ: ಅತ್ಯಂತ ಹೇಯ ಕೃತ್ಯವೊಂದರಲ್ಲಿ ಹೊಸದೆಹಲಿಯ ಮೆಟ್ರೋ ರೈಲಿನ ಕಿಕ್ಕಿರಿದ ಕೋಚ್‌ನಲ್ಲಿ ಪ್ರಯಾಣಿಸುತ್ತಿರುವ ವೇಳೆ ಕಾಮಾಂಧನೊಬ್ಬನು ಹಸ್ತಮೈಥುನ ಮಾಡಿ ಅಪ್ರಾಪ್ತ ಬಾಲಕಿಯ ಮೇಲೆ ಸ್ಖಲನ ಮಾಡಿ ವಿಕೃತಿ ಮೆರೆದಿದ್ದಾನೆ. ಕೃತ್ಯಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಮೂಲದ ವ್ಯಕ್ತಿಯನ್ನು ಬಂಧಿಸಿದ್ದಾರೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ದೆಹಲಿ ಮೆಟ್ರೋದ ‘ರೆಡ್ ಲೈನ್’ ನಲ್ಲಿ ಬುಧವಾರ ರಾತ್ರಿ 8:30 ರ ಸುಮಾರಿಗೆ ಅತ್ಯಂತ ಹೇಯ ಘಟನೆಯೊಂದು ಸಂಭವಿಸಿದೆ. ಆರೋಪಿಯು ಅಪ್ರಾಪ್ತ ಬಾಲಕಿ ಮತ್ತು ಆಕೆಯ ತಾಯಿ ಇರುವ ಬೋಗಿಯಲ್ಲಿಯೇ ಪ್ರಯಾಣಿಸುತ್ತಿದ್ದ. ರಕ್ಷಾ ಬಂಧನ ಹಬ್ಬದ ನಿಮಿತ್ತ ಜನ ಕಿಕ್ಕಿರಿದು ತುಂಬಿದ್ದರು. ಆ ವ್ಯಕ್ತಿ ಹಸ್ತಮೈಥುನ ಮಾಡಿಕೊಡು ಬಾಲಕಿಯ ಮೇಲೆಯೇ ಸ್ಖಲನ ಮಾಡಿದ್ದಾನೆ. ಅದನ್ನು ಬಾಲಕಿಯ ತಾಯಿ ಗಮನಿಸಿ ಸೀಲಾಂಪುರ ನಿಲ್ದಾಣದಲ್ಲಿ ಇಳಿದಿದ್ದಾರೆ. ತಕ್ಷಣ ಗಮನಿಸಿದ ಪಶ್ಚಿಮ ಬಂಗಾಳ ಮೂಲದ ಆರೋಪಿಯನ್ನು ಇಬ್ಬರು ಸಹ ಪ್ರಯಾಣಿಕರು ಹಿಡಿದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿಯನ್ನು ಶಹದಾರ ನಿಲ್ದಾಣದಲ್ಲಿ ದೆಹಲಿ ಮೆಟ್ರೋ ಅಧಿಕಾರಿಗಳಿಗೆ ಹಸ್ತಾಂತರಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ದೆಹಲಿ ಮೆಟ್ರೋದಲ್ಲಿ ಇಂತಹ ಕುಕೃತ್ಯಗಳ ಸರಣಿಯಲ್ಲಿ ಈ ಘಟನೆ ಇತ್ತೀಚಿನ ಸೇರ್ಪಡೆಯಾಗಿದೆ.