-->
ಚಾರ್ಜ್ ಗಿಟ್ಟು ಹಾಡು ಹಾಡುತ್ತಿರುವಾಗ ಭಾರೀ ಶಬ್ದದೊಂದಿಗೆ ಸ್ಪೋಟಗೊಂಡ ಕರೋಕೆ ಮೈಕ್: ಅದೃಷ್ಟವಶಾತ್ ಬಾಲಕಿ ಪಾರು

ಚಾರ್ಜ್ ಗಿಟ್ಟು ಹಾಡು ಹಾಡುತ್ತಿರುವಾಗ ಭಾರೀ ಶಬ್ದದೊಂದಿಗೆ ಸ್ಪೋಟಗೊಂಡ ಕರೋಕೆ ಮೈಕ್: ಅದೃಷ್ಟವಶಾತ್ ಬಾಲಕಿ ಪಾರು


ಪಾಲಕ್ಕಾಡ್: ಕರೋಕೆ ಮೈಕ್​ ಚಾರ್ಜ್​ಗಿಟ್ಟು ಹಾಡುತ್ತಿದ್ದ ವೇಳೆ ಅದು ಸ್ಪೋಟಗೊಂಡಿರುವ ಘಟನೆ ಕೇರಳದ ಪಲಕ್ಕಾಡ್​ ಜಿಲ್ಲೆಯ ಕಲ್ಲಡಿಕೋಡ್​ನಲ್ಲಿ ನಡೆದಿದೆ. ಅದೃಷ್ಟವಶಾತ್​ ಈ ಘಟನೆಯಲ್ಲಿ 6 ವರ್ಷದ ಬಾಲಕಿ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಫಿನ್ಸಾ ಇರೇನ್​ ಭಾರೀ ಗಂಡಾಂತರದಿಂದ ಪಾರಾದ ಬಾಲಕಿ. ಮೈಕ್ ಭಾರೀ ಶಬ್ದದೊಂದಿಗೆ​ ಸ್ಪೋಟಗೊಂಡಿದೆ. ಆದರೆ, ಬಾಲಕಿಗೆ ಏನೂ ಆಗಿಲ್ಲ. ಕರೋಕೆ ಮೈಕ್​ ಅನ್ನು ಆನ್​ಲೈನ್​ ಸೈಟ್​ ಒಂದರಲ್ಲಿ ಕೇವಲ 600 ರೂಪಾಯಿಗೆ ಖರೀದಿಸಲಾಗಿತ್ತು.

ಮೈಕ್​ ಅನ್ನು ಚಾರ್ಜ್​ಗಿಟ್ಟು, ಬಾಲಕಿ ಹಾಡು ಹಾಡುತ್ತಿದ್ದಳು. ಈ ವೇಳೆ ಇದ್ದಕ್ಕಿದ್ದಂತ ಭಾರೀ ಶಬ್ಧದೊಂದಿಗೆ ಮೈಕ್ ಸ್ಪೋಟಗೊಂಡಿದೆ. ಅದು ಚೀನಾ ಮೇಡ್ ಮೈಕ್​ ಎಂದು ಬಾಲಕಿಯ ಪಾಲಕರು ತಿಳಿಸಿದ್ದಾರೆ. ಆದರೆ ಮೈಕ್‌ನಲ್ಲಿ ಕಂಪೆನಿಯ ಹೆಸರು ಸ್ಪಷ್ಟವಾಗಿಲ್ಲದ ಕಾರಣ, ಕಂಪೆನಿಯ ವಿರುದ್ಧ ಯಾವುದೇ ದೂರು ನೀಡಲು ಕುಟುಂಬಕ್ಕೆ ಸಾಧ್ಯವಾಗುತ್ತಿಲ್ಲ.

ಯಾವುದೇ ಸಾಧನಗಳನ್ನು ಚಾರ್ಜ್​ಗೆ ಹಾಕಿ ಬಳಸುವ ಅಭ್ಯಾಸವನ್ನು ಮೊದಲು ಬಿಡಬೇಕು. ಸಣ್ಣ ನಿರ್ಲಕ್ಷ್ಯ ಕೆಲವೊಮ್ಮೆ ಪ್ರಾಣಕ್ಕೆ ಕುತ್ತು ತರಬಹುದು. ಸದ್ಯಕ್ಕೆ ಈ ಪ್ರಕರಣದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸದೇ ಇರುವುದು ಅದೃಷ್ಟ ಎಂದೇ ಹೇಳಬಹುದು. ಮಕ್ಕಳ ಬಗ್ಗೆ ತುಂಬಾ ಎಚ್ಚರಿಕೆ ವಹಿಸಬೇಕು ಎಂಬುದಕ್ಕೆ ಈ ಘಟನೆ ಒಂದು ಎಚ್ಚರಿಕೆ ಗಂಟೆಯಾಗಿದೆ. 

Ads on article

Advertise in articles 1

advertising articles 2

Advertise under the article