ನನ್ನ ನೆಚ್ಚಿನ ನೇತ್ರಾವತಿ ಟೀಚರ್- ಕೇಶವ ಬಂಟ್ವಾಳ
Monday, September 4, 2023
ನನ್ನ ಹೆಸರು ಕೇಶವ. ನಾನು ಎಸ್.ವಿ.ಎಸ್. ಹಿರಿಯ ಪ್ರಾಥಮಿಕ ಶಾಲೆ ,ಬಂಟ್ವಾಳ ದಲ್ಲಿ ಕಲಿತಿದ್ದು. ನನಗೆ ಒಂದನೇ ತರಗತಿಗೆ ಶ್ರೀಮತಿ ನೇತ್ರಾವತಿ ಟೀಚರ್ ಎಂಬ ಶಿಕ್ಷಕರು ಇದ್ದರು. ಅವರು ಕೂಡ ಬಂಟ್ವಾಳ ದವರಾಗಿದ್ದು, ಸದ್ಯ ಮಂಗಳೂರಿನಲ್ಲಿ ಇರುತ್ತಾರೆ. ಶ್ರೀಮತಿ ನೇತ್ರಾವತಿ ಟೀಚರ್ ರವರು ನನ್ನ ವಿದ್ಯಾರ್ಥಿ ಜೀವನಕ್ಕೆ ಭದ್ರ ಬುನಾದಿ ಹಾಕಿಕೊಟ್ಟವರು.
ಒಮ್ಮೆ ನಾನು ಅನಾರೋಗ್ಯದಿಂದ ಮನೆಯಲ್ಲಿದ್ದು ತರಗತಿಗೆ ತುಂಬಾ ದಿನ ಗೈರು ಹಾಜರಾಗಿದ್ದೆ. ಆಗ ಗುರುಗಳು ಬೇರೆ ಮಕ್ಕಳೊಂದಿಗೆ ನನ್ನ ಮನೆ ಹುಡುಕಿಕೊಂಡು ಬಂದು ನನ್ನ ಆರೋಗ್ಯ ವಿಚಾರಿಸಿ ನನಗೆ ಆಶೀರ್ವಾದ ಮಾಡಿರುವರು.
ಕೇಶವ
ಬಂಟ್ವಾಳ