ಟಾಪ್ ಲೆಸ್ ಆಗಿ ನಟಿಸುವ ಬಗ್ಗೆ ತಮ್ಮ ಅಭಿಪ್ರಾಯವೇನು? - ನಟಿ ನಿಲೀಮಾ ಕೊಟ್ಟ ಉತ್ತರವೇನು ಗೊತ್ತೇ ...!
Monday, September 4, 2023
ಚೆನ್ನೈ: ತಮಿಳು ನಟಿ ನೀಲಿಮಾ ರಾಣಿಯವರು ಕಮಲ್ ಹಾಸನ್ ಅವರ 'ದೇವರ ಮಗನ್' ಸಿನಿಮಾದಲ್ಲಿ ಬಾಲ ನಟಿಯಾಗಿ ಅಭಿನಯಿಸುವ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟವರು. ಬಳಿಕ ನಾನ್ ಮಹಾನ್ ಅಲ್ಲ, ಸಂತೋಷ್ ಸುಬ್ರಮಣ್ಯಂ ಸೇರಿದಂತೆ ಅನೇಕ ಸಿನಿಮಾಗಲ್ಲಿ ನಟಿಸಿದ್ದಾರೆ.
ಆ ಬಳಿಕ ನೀಲಿಮಾ ಸಿನಿಮಾಗಳಿಂತ ಧಾರಾವಾಹಿಗಳಲ್ಲಿ ಹೆಚ್ಚು ನಟಿಸಿದ್ದಾರೆ. ಸುಮಾರು 50 ಧಾರಾವಾಹಿಗಳಲ್ಲಿ ಪ್ರಧಾನ ಪಾತ್ರದಲ್ಲಿ ನಟಿಸುವ ಮೂಲಕ ತಮಿಳು ಮನರಂಜನಾ ಲೋಕದಲ್ಲಿ ತುಂಬಾ ಖ್ಯಾತಿ ಗಳಿಸಿದ್ದಾರೆ. ಅಲ್ಲದೆ, ಅವರೊಬ್ಬ ಕಂಠದಾನ ಕಲಾವಿದೆಯೂ ಹೌದು.
ನೀಲಿಮಾ ಅವರು ಇತ್ತೀಚೆಗೆ ರಾಘವ ಲಾರೆನ್ಸ್ ಅಭಿನಯದ ರುದ್ರನ್ ಚಿತ್ರದಲ್ಲಿ ವೈದ್ಯೆಯ ಪಾತ್ರವನ್ನು ನಿರ್ವಹಿಸಿದ್ದರು. ಇತ್ತೀಚೆಗೆ ಅವರು ತಮ್ಮ ಸಿನಿಮಾ ಅನುಭವದ ಬಗ್ಗೆ ಚ್ಯಾನೆಲ್ ಒಂದಕ್ಕೆ ಸಂದರ್ಶನ ನೀಡಿದ್ದಾರೆ. ಈ ವೇಳೆ ನೀಲಿಮಾ ಹೇಳಿರುವ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಟಿಯರ ಅರೆಬೆತ್ತಲೆ ನಟನೆಯ ಬಗ್ಗೆ ತುಂಬಾ ಬೋಲ್ಡ್ ಆಗಿ ಮಾತನಾಡಿದ್ದಾರೆ. ಸಿನಿಮಾಗಳಲ್ಲಿ ಟಾಪ್ಲೆಸ್ ಆಗಿ ನಟಿಸುವ ಬಗ್ಗೆ ನಿಮ್ಮ ಅಭಿಪ್ರಾಯವೇನು? ಎಂದು ನೀಲಿಮಾ ಅವರನ್ನು ಪ್ರಶ್ನಿಸಲಾಯಿತು.
ಇದಕ್ಕೆ ಉತ್ತರಿಸಿದ ನೀಲಿಮಾ, ನಿಜವಾಗಿ ಟಾಸ್ಲೆಸ್ ಆಗಿ ನಟಿಸುತ್ತಿರುವುದು ದೊಡ್ಡ ವಿಷಯ ಎಂದು ನನಗನ್ನಿಸುವುದಿಲ್ಲ. ನಾನು ಸಾಕಷ್ಟು ಚಿತ್ರಗಳನ್ನು ಮಾಡಿದ್ದೇನೆ. ಎಷ್ಟೋ ನಟಿಯರು ಇಂತಹ ದೃಶ್ಯಗಳಲ್ಲಿ ನಟಿಸಿದ್ದಾರೆ. ಇದು ದೊಡ್ಡ ವಿಷಯ ಎಂದು ನಾನು ಭಾವಿಸುವುದಿಲ್ಲ ಎಂದಿದ್ದಾರೆ. ನಟಿಯ ಈ ಉತ್ತರ ಕೇಳಿ ನೆಟ್ಟಿಗರು ಹುಬ್ಬೇರಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸಕ್ರಿಯರಾಗಿರುವ ನಿಲೀಮಾ ಅಭಿಮಾನಿಗಳೊಂದಿಗೆ ಆಗಾಗ ಸಂವಾದ ನಡೆಸುತ್ತಿರುತ್ತಾರೆ. ಈ ಹಿಂದೆ ತಮ್ಮ ಇನ್ಸ್ಟಾಗ್ರಾಂ ಪೇಜ್ನಲ್ಲಿ ಪ್ರಶೋತ್ತರ ಸೆಷೆನ್ಸ್ ನಡೆಸಿದ್ದರು. ಈ ವೇಳೆ ನೆಟ್ಟಿಗನೊಬ್ಬ ನೀವು ಧರಿಸುವ ಒಳಉಡುಪಿನ ಸೈಜ್ ಎಷ್ಟು? ಎಂದು ಕೇಳಿದ್ದ. ಇದಕ್ಕೆ ಉತ್ತರಿಸಿದ್ದ ನೀಲಿಮಾ ನಾನೇಕೆ ಅದನ್ನು ನಿನಗೆ ಹೇಳಬೇಕು? ನೀನೇನು ಮಾರಾಟ ಮಾಡುತ್ತೀದ್ದೀಯಾ? ಎಂದಿದ್ದಾರೆ. ಮತ್ತೊಬ್ಬ ನೆಟ್ಟಿಗ ನಿಮಗೆ ಯಾವ ಲೈಂಗಿಕ ಭಂಗಿ ಇಷ್ಟ? ತಿಂಗಳಲ್ಲಿ ಎಷ್ಟು ಬಾರಿ ಲೈಂಗಿಕ ಕ್ರಿಯೆ ನಡೆಸುತ್ತೀರಾ? ಎಂದು ಕೇಳಿದ್ದ. ಇದಕ್ಕೆ ಪ್ರತಿಕ್ರಿಯಿಸಿದ ನೀಲಿಮಾ, ಇಂತಹ ಕ್ಷೀಣಬುದ್ಧಿ ಪ್ರಶ್ನೆಗಳಿಗೆ ಹೇಗೆ ಉತ್ತರ ನೀಡಲಿ ಎಂದಿದ್ದರು.