ಯುವಕನೊಂದಿಗಿದ್ದ ರುಕ್ಮಿಣಿ ವಸಂತ್ ಫೋಟೋ ವೈರಲ್: ಸ್ಪಷ್ಟನೆ ನೀಡಿ ವದಂತಿಗೆ ತೆರೆಯೆಳೆದ ನಟಿ
Monday, September 25, 2023
ಬೆಂಗಳೂರು: ರಕ್ಷಿತ್ ಶೆಟ್ಟಿಯವರ ಬಹು ನಿರೀಕ್ಷಿತ ಸಿನಿಮಾ ಸಪ್ತ ಸಾಗರದಾಚೆ ಎಲ್ಲೋ ಮೊನ್ನೆ ರಿಲೀಸ್ ಆಗಿ ಅಭಿಮಾನಿಗಳಿಂದ ಸಖತ್ ರೆಸ್ಪಾನ್ಸ್ ಸಿಕ್ಕಿತ್ತು. ಈ ಸಿನಿಮಾ ಸೆಟ್ಟೆರಿದ ದಿನದಿಂದಲೂ ಸಾಕಷ್ಟು ನಿರೀಕ್ಷೆಯನ್ನು ಹುಟ್ಟಿಸಿತ್ತು. ಈ ಸಿನಿಮಾದ ನಾಯಕಿ ನಟಿ ರುಕ್ಮಿಣಿ ವಸಂತ್ ಚೆನ್ನಾಗಿಯೇ ನಟಿಸಿದ್ದರು. ರಕ್ಷಿತ್ ಶೆಟ್ಟಿಯೊಂದಿಗೆ ಡ್ಯುಯೇಟ್ ಹಾಡಿದ ಮೇಲೆ ರುಕ್ಮಿಣಿ ಎಲ್ಲರ ಗಮನ ಸೆಳೆದಿದ್ದಾರೆ. ಅವರ ನಟನೆ, ಮುದ್ದಾದ ನಗುವಿಗೆ ಅಭಿಮಾನಿಗಳು ಮನಸೋತಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಬಾಯ್‌ಫ್ರೆಂಡ್ ಬಗ್ಗೆ ರುಕ್ಮಿಣಿ ವಸಂತ್‌ಗೆ ಪ್ರಶ್ನೆ ಕೇಳಲಾಗಿದೆ.
ಯುವಕನೊನ್ಬನೊಂದಿಗಿದ್ದ ರುಕ್ಮಿಣಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಇಬ್ಬರ ಸಂಭಾಷಣೆಯೊಂದಿಗಿನ ಫೋಟೋ ಸೇರಿಸಿ ಟ್ರೋಲ್ ಮಾಡಲಾಗಿತ್ತು. ಹಾಗಾಗಿ ರುಕ್ಮಿಣಿ ವಸಂತ್ ಎಂಗೇಜ್ ಆಗಿದ್ದಾರೆ ಎಂದು ಹೇಳಲಾಗಿತ್ತು. ಈ ಸುದ್ದಿ ನಿಜನಾ ಎಂಬ ಪ್ರಶ್ನೆಗೆ ರುಕ್ಮಿಣಿ ಉತ್ತರಿಸಿದ್ದಾರೆ.
ಫೋಟೋದಲ್ಲಿರುವುದು ತನ್ನ ಗೆಳೆಯ, ನಾನು ಇನ್ನೂ ಸಿಂಗಲ್ ಎಂದು ರುಕ್ಮಿಣಿ ಸ್ಪಷ್ಟನೆ ನೀಡಿದ್ದಾರೆ. ಚಿತ್ರರಂಗಕ್ಕೆ ಹೊಸಬಳಾಗಿದ್ದರೂ ನನ್ನ ಸಿನಿಮಾಗಳ ಬಗ್ಗೆ, ನನ್ನ ಖಾಸಗಿ ಜೀವನಗಳ ಬಗ್ಗೆ ಜನ ಕೇರ್ ಮಾಡುತ್ತಿರೋದು ಖುಷಿ ಕೊಟ್ಟಿದೆ ಎಂದಿದ್ದಾರೆ.
ಕನ್ನಡದಲ್ಲಿ ಮೊದಲು ರಿಲೀಸ್ ಆಗಿದ್ದ ಸಪ್ತ ಸಾಗರದಾಚೆ ಎಲ್ಲೋ ಸಿನಿಮಾ ಇದೀಗ ಪರ ಭಾಷೆಗೂ ಕಾಲಿಡುತ್ತಿದೆ. ದಕ್ಷಿಣದ ಎಲ್ಲ ಭಾಷೆಯಲ್ಲೂ ಚಿತ್ರವನ್ನು ರಿಲೀಸ್ ಮಾಡೋ ಪ್ಲಾನ್ ಇದ್ದೇ ಇದೆ. ಆದರೆ ಸದ್ಯಕ್ಕೆ ತೆಲುಗು ಮತ್ತು ಮಲೆಯಾಳಂ ಭಾಷೆಯ ಸಿನಿಮಾ ರಿಲೀಸ್ ಇದೀಗ ಫಿಕ್ಸ್ ಆಗಿದೆ. ಸಪ್ತ ಸಾಗರದಾಚೆ ಎಲ್ಲೋ ಮಲೆಯಾಳಂ ಸಿನಿಮಾವನ್ನು ಇದೇ ತಿಂಗಳ 28 ರಂದು ರಿಲೀಸ್ ಮಾಡಲಾಗುತ್ತಿದೆ. ರಕ್ಷಿತ್ ಶೆಟ್ಟಿ ಅಧಿಕೃತವಾಗಿಯೇ ಈ ಒಂದು ವಿಷಯವನ್ನು ಹೇಳಿಕೊಂಡಿದ್ದಾರೆ.