ಈ ರೀತಿಯಾಗಿ ಟೊಮ್ಯಾಟೋವನ್ನು ಮುಖಕ್ಕೆ ಹಚ್ಚುವುದರಿಂದ ಎಷ್ಟೆಲ್ಲ ಬೆನಿಫಿಟ್ಸ್ ಇದೆ ಗೊತ್ತಾ..! SKIN CARE..!
Friday, September 29, 2023
ಟೊಮೇಟೊ ಐಸ್ ಕ್ಯೂಬ್ ಗಳನ್ನು ಬಳಸಿ ಫೇರ್ ಸ್ಕಿನ್ ಪಡೆಯುವುದಲ್ಲದೆ, ಎಲ್ಲಾ ರೀತಿಯ ತ್ವಚೆಯ ಸಮಸ್ಯೆಗಳಿಂದ ಸುಲಭವಾಗಿ ಮುಕ್ತಿ ಪಡೆಯಬಹುದು. ಬನ್ನಿ ಈ ಐಸ್ ಕ್ಯೂಬ್ ತಯಾರಿಸುವುದು ಹೇಗೆ ಎಂದು ತಿಳಿಯೋಣ.
ಟೊಮೆಟೊ ಐಸ್ ಕ್ಯೂಬ್‌ಗಳನ್ನು ತಯಾರಿಸಲು ಬೇಕಾಗುವ ಸಾಮಗ್ರಿಗಳು
2 ಟೊಮ್ಯಾಟೊ
1 ಚಮಚ ಜೇನುತುಪ್ಪ
ನೀರು
ಟೊಮೇಟೊ ಐಸ್ ಕ್ಯೂಬ್ ಗಳನ್ನು ಮಾಡುವ ವಿಧಾನ
ಈ ಐಸ್ ಕ್ಯೂಬ್ ಗಳನ್ನು ತಯಾರಿಸಲು ನೀವು ಮೊದಲು 2 ಮಾಗಿದ ಟೊಮೇಟೊಗಳನ್ನು ತೆಗೆದುಕೊಳ್ಳಬೇಕು.
ಅವುಗಳನ್ನು ಮಿಕ್ಸಿಗೆ ಹಾಕಿ ಮೃದುವಾದ ಪೇಸ್ಟ್ ಮಾಡಿ.
ಅದಕ್ಕೆ 1 ಟೀಸ್ಪೂನ್ ಜೇನುತುಪ್ಪವನ್ನು ಸೇರಿಸಿ ಚನ್ನಾಗಿ ಮಿಶ್ರಣ ಮಾಡಿ
ಈ ಮಿಶ್ರಣವನ್ನು ಐಸ್ ಮೋಲ್ಡ್‌ಗಳಲ್ಲಿ ಹಾಕಿ 2 ರಿಂದ 3 ಗಂಟೆಗಳ ಕಾಲ ರೆಫ್ರಿಜರೇಟರ್‌ನಲ್ಲಿಡಿ.
ಟೊಮೆಟೊ ಐಸ್ ಕ್ಯೂಬ್ ಗಳನ್ನು ಹಚ್ಚುವ ವಿಧಾನ
ಟೊಮೇಟೊ ಐಸ್ ಕ್ಯೂಬ್ ಗಳನ್ನು ಹಚ್ಚುವ ಮೊದಲು ಮುಖವನ್ನು ಸ್ವಚ್ಛವಾದ ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಬೇಕು.
ಅದರ ನಂತರ ಸಿದ್ಧಪಡಿಸಿದ ಐಸ್ ಕ್ಯೂಬ್ ಅನ್ನು ಮುಖದ ಮೇಲೆ ಅನ್ವಯಿಸಬೇಕು.
ಸುಮಾರು 10 ನಿಮಿಷಗಳ ಕಾಲ ಚೆನ್ನಾಗಿ ಮಸಾಜ್ ಮಾಡಿಕೊಳ್ಳಿ
ಈ ಕ್ಯೂಬ್‌ಗಳನ್ನು ವಾರಕ್ಕೆ 1 ರಿಂದ 2 ಬಾರಿ ಹಚ್ಚಿದರೆ ಉತ್ತಮ ಫಲಿತಾಂಶ ಸಿಗುತ್ತದೆ.