ಸೋನು ಶ್ರೀನಿವಾಸಗೌಡ ಬಿಕಿನಿ ಪೊಟೋ- ಬೆಚ್ಚಿಬಿದ್ದ ಫಾಲೋವರ್ಸ್!
Monday, September 4, 2023
ಬೆಂಗಳೂರು: HOT ವಿಡಿಯೋವೊಂದನ್ನು ಹಂಚಿಕೊಳ್ಳುವ ಮೂಲಕ ಕೆಟ್ಟ ಕಾಮೆಂಟ್ ಮಾಡಿ, ಟ್ರೋಲ್ ಮಾಡುವವರಿಗೆ ಮಾಜಿ ಬಿಗ್ಬಾಸ್ ಸ್ಪರ್ಧಿ ಸೋನು ಶ್ರೀನಿವಾಸ ಗೌಡ ಅವರು ಖಡಕ್ ತಿರುಗೇಟು ನೀಡಿದ್ದಾರೆ.
ಸೋನು ಶ್ರೀನಿವಾಸ ಗೌಡರನ್ನು ಬಗ್ಗೆ ಸಿಕ್ಕಾಪಟ್ಟೆ ಟ್ರೋಲ್ ವಿಡಿಯೋಗಳು ಮತ್ತು ಮೀಮ್ಸ್ ಯಾವಾಗಲೂ ಹರಿದಾಡುತ್ತಲೇ ಇರುತ್ತವೆ. ಪ್ರತಿಭೆಯಿಂದ ಗುರುತಿಸಿಕೊಳ್ಳಲು ಸಾಧ್ಯವಾಗದೇ ವಿವಾದಗಳಿಂದಲೇ ಈಕೆ ಹೆಚ್ಚು ಸದ್ದು ಮಾಡಿದ್ದಾರೆ.
ಇದೀಗ ಸೋನು ಗೌಡ ಪ್ರವಾಸಿಗರ ಸ್ವರ್ಗ ಮಾಲ್ಡೀವ್ಸ್ನಲ್ಲಿ ಬೀಡುಬಿಟ್ಟಿದ್ದಾರೆ. ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಿರುವುದರ ಜತೆಗೆ ಬಿಕಿನಿ ಫೋಟೋ ಸೇರಿದಂತೆ ಹಾಟ್ ಫೋಟೋಗಳನ್ನು INSTAGRAM ನಲ್ಲಿ ಹರಿಬಿಡುವ ಮೂಲಕ ಪಡ್ಡೆ ಹುಡುಗರ ಮೈ ಬಿಸಿಯೇರಿಸುತ್ತಿದ್ದಾರೆ. ಆದರೆ, ಸೋನು ಗೌಡ ಹಾಟ್ ಅವತಾರ ಕಂಡು ಸಾಕಷ್ಟು ಮಂದಿ ಅಶ್ಲೀಲ ಕಾಮೆಂಟ್ಗಳನ್ನು ಮಾಡುವ ಮೂಲಕ ಟ್ರೋಲ್ ಮಾಡುತ್ತಿದ್ದಾರೆ. ಬಹುತೇಕ ಮಂದಿ ಕೆಟ್ಟ ಕಾಮೆಂಟ್ಗಳನ್ನೇ ಮಾಡುತ್ತಿದ್ದಾರೆ.
ಕೆಟ್ಟ ಕಾಮೆಂಟ್ಗಳನ್ನು ಗಮನಿಸಿರುವ ಸೋನು ಗೌಡ ಇದೀಗ ವಿಡಿಯೋವೊಂದನ್ನು ಹಂಚಿಕೊಂಡು ಅಶ್ಲೀಲ ಕಾಮೆಂಟ್ ಮಾಡುವವರಿಗೆ ಖಡಕ್ ಪ್ರತಿಕ್ರಿಯೆಯನ್ನು ನೀಡಿದ್ದಾರೆ. “ಡಿಯರ್ ಹೇಟರ್ಸ್ (ಪ್ರೀತಿಯ ದ್ವೇಷಿಗಳೇ) ಕಾಮೆಂಟ್ ಬಾಕ್ಸ್ ನಿಮ್ಮದೆ. ನೆಗೆಟಿವ್ ಅಥವಾ ಪಾಸಿಟಿವ್ ಆಗಿರಲಿ, ಪಾಪ ನಿಮ್ಮ ಸಮಯವನ್ನು ನನ್ನ ಕಾಮೆಂಟ್ ಬಾಕ್ಸ್ಗೆ ಕೊಡ್ತಿರಾ ಅಂದ್ರೆ ನಿಜಕ್ಕೂ ಗ್ರೇಟ್” ಎಂದು ಕೆಟ್ಟ ಕಾಮೆಂಟ್ ಮಾಡುವವರಿಗೆ ತಿರುಗೇಟು ನೀಡಿದ್ದಾರೆ.