ರಾಮದೇವರ ಬೆಟ್ಟದಿಂದ ಜಿಗಿದು ಪ್ರಾಣ ಕಳೆದುಕೊಳ್ಳಲೆತ್ನಿಸಿದ ವಿದ್ಯಾರ್ಥಿನಿ
Thursday, September 14, 2023
ರಾಮನಗರ: ಇಲ್ಲಿನ ರಾಮದೇವರ ಬೆಟ್ಟದಿಂದ ಜಿಗಿದು ಬೆಂಗಳೂರಿನ ಕಾಲೇಜೊಂದರ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆಗೆ ಯತ್ನಿಸಿದ್ದು, ಇದೀಗ ಆಕೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಇಶಾ ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ. ಬೆಂಗಳೂರಿನ ಬೆಮೆಲ್ ಲೇಔಟ್ನ ನಿವಾಸಿಯಾಗಿರುವ ಈಕೆ ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಪದವಿ ವಿದ್ಯಾರ್ಥಿನಿ. ಬೆಟ್ಟದಿಂದ ಹಾರಿದ ಈಕೆಗೆ ಸಣ್ಣಪುಟ್ಟ ಗಾಯವಾಗಿದೆ. ಸದ್ಯ ಆಕೆಗೆ ರಾಮನಗರ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ. ಬಳಿಕ ಬೆಂಗಳೂರಿನ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.
ಇಶಾ ಪರೀಕ್ಷೆಯ ಭಯದಿಂದ ಖಿನ್ನತೆಗೊಳಗಾಗಿದ್ದಳು. ರಾಮದೇವರ ಬೆಟ್ಟಕ್ಕೆ ಒಬ್ಬಳೇ ಬಂದಿದ್ದಳು. ಬಳಿಕ ಬೆಟ್ಟದ ವೀಕ್ಷಣಾ ಸ್ಥಳದಿಂದ ಜಿಗಿದಿದ್ದಾಳೆ. ಅದೃಷ್ಟವಶಾತ್ ಗಿಡಮರಗಳ ಕೊಂಬೆಗಳ ಮಧ್ಯೆ ಸಿಲುಕಿಕೊಂಡಿದ್ದ ಇಶಾ ಬೆದರಿಕೊಂಡು ಪ್ರಜ್ಞೆ ತಪ್ಪಿದ್ದಳು
ಬೆಟ್ಟದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸರಿಗೆ ಸಂಜೆ ವಿಚಾರ ಗೊತ್ತಾಗಿದೆ. ತಕ್ಷಣ ಅವರು ಸ್ಥಳೀಯರ ನೆರವಿನೊಂದಿಗೆ ಇಶಾಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.