ಅತ್ಯಾಚಾರ ಆರೋಪದಿಂದ ಮನನೊಂದ ಪ್ರಿಯಕರ ಫೇಸ್ ಬುಕ್ ಲೈವ್ ನಲ್ಲಿಯೇ ನದಿಗೆ ಹಾರಿ ಆತ್ಮಹತ್ಯೆ
Thursday, September 14, 2023
ಮಹಾರಾಷ್ಟ್ರ: ಪ್ರೇಯಸಿಯೇ ಅತ್ಯಾಚಾರ ಆರೋಪ ಮಾಡಿದ್ದಾಳೆಂದು ಮನೊಂದ ಪ್ರಿಯಕರನೊಬ್ಬ ಫೇಸ್‌ಬುಕ್ ಲೈವ್ನಲ್ಲಿಯೇ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.
38 ವರ್ಷದ ಮನೀಶ್, 19 ವರ್ಷದ ಕಾಜಲ್ ಎಂಬವಳ ಪ್ರೀತಿಯ ಬಲೆಗೆ ಬಿದ್ದಿದ್ದ. ಸ್ವಲ್ಪದಿನಗಳ ಬಳಿಕ ಆಕೆ ಆತನ ಮೇಲೆ ಅತ್ಯಾಚಾರ ಆರೋಪ ಮಾಡಿ ತನ್ನ ಕುಟುಂಬದವರೊಂದಿಗೆ ಸೇರಿ ಬ್ಲ್ಯಾಕ್ ಮೇಲೆ ಮಾಡಲು ಆರಂಭಿಸಿದ್ದಳು.
ಇದರಿಂದ ಮನೀಶ್ ಮನನೊಂದು ಸೆಪ್ಟೆಂಬರ್ 10 ರಂದು ಫೇಸ್‌ಬುಕ್ ಲೈವ್ನಲ್ಲಿ ತನ್ನ ಪ್ರೇಯಸಿ ಹಾಗೂ ಆಕೆಯ ಕುಟುಂಬದವರು ತನ್ನ ಮೇಲೆ ಅತ್ಯಾಚಾರ ಆರೋಪ ಮಾಡುತ್ತಿದ್ದಾರೆ. ಅಲ್ಲದೆ ಕುಟುಂಬದವರು 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಈ ಹಣವನ್ನು ನೀಡಲು ವಿಫಲವಾದರೆ ಆತನ ವಿರುದ್ಧ ದೂರು ದಾಖಲಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ಆತ ಹೇಳಿದ್ದಾನೆ.
ಸೆಪ್ಟೆಂಬರ್ 6 ರಂದು, ಯುವತಿ ತನ್ನ ಮನೆಯಿಂದ ನಾಪತ್ತೆಯಾಗಿದ್ದಳು. ಆಕೆಯ ಕುಟುಂಬ ಸದಸ್ಯರು ಮನೀಶ್ ನೊಂದಿಗೆ ಓಡಿ ಹೋಗಿದ್ದಾಳೆ ಎಂದು ಆರೋಪಿಸಿದ್ದಾರೆ.
ಆದ್ದರಿಂದ ಮೂರು ಮಕ್ಕಳ ತಂದೆ ಮನೀಶ್ ಕಿರುಕುಳ ತಾಳಲಾರದೆ ನಾಗಪುರದಲ್ಲಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೀಶ್ ತಾನು ಕಾಜಲ್ ನೊಂದಿಗೆ ದೈಹಿಕ ಸಂಪರ್ಕ ಹೊಂದಿರಲಿಲ್ಲ ಎಂದು ಫೇಸ್‌ಬುಕ್ ಲೈವ್ನಲ್ಲಿ ಹೇಳಿದ್ದಾನೆ.
ಫೇಸ್‌ಬುಕ್ ಲೈವ್ ವೀಡಿಯೋ ಹೊರಬಿದ್ದ ಬಳಿಕ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಮನೀಶ್ ಮೃತದೇಹವನ್ನು ನದಿಯಿಂದ ಮೇಲತ್ತಲಾಗಿದೆ. ನಾಗಪುರದ ಕಲಮನ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿದ್ದಾರೆ.