ಇಎಂಐ ಕಟ್ಟಲು ನಿರಾಕರಿಸಿದ ಪ್ರಿಯಕರನ ಫ್ಲ್ಯಾಟ್ ನಲ್ಲಿಯೇ ಆತ್ಮಹತ್ಯೆಗೆ ಶರಣಾದ ಟೆಕ್ಕಿ
Wednesday, September 20, 2023
ಪುಣೆ: ಇಎಂಐ ಕಟ್ಟಲು ಪ್ರಿಯಕರ ನಿರಾಕರಿಸಿದ್ದಕ್ಕೆ ಮನನೊಂದು ಟೆಕ್ಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ.
ರಸಿಕಾ ರವೀಂದ್ರ ದಿವಟೆ (25) ಮೃತ ಟೆಕ್ಕಿ. ಈಕೆ ಪುಣೆಯ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಕಳೆದ 8 ತಿಂಗಳಿಂದ ರಸಿಕಾ, ಆದರ್ಶ್ ಅಜಯ್ ಕುಮಾರ್ ಮೆನನ್ ಪ್ರೀತಿಸುತ್ತಿದ್ದರು. ಇಬ್ಬರು ಒಂದೇ ಕಂಪನಿಯಲ್ಲಿ ಜೊತೆಯಾಗಿ ಕೆಲಸ ಮಾಡುತ್ತಿದ್ದರು.
ರಸಿಕಾ ತನ್ನ ಪ್ರಿಯಕರನಿಗಾಗಿ ಸಾಲ ಮಾಡಿ ಎಪ್ರಿಲ್‌ನಲ್ಲಿ ಕಾರು ಖರೀದಿಸಿದ್ದಳು. ಆಕೆಯೇ ಡೌನ್ ಪೇಮೆಂಟ್ ಮೊತ್ತವನ್ನು ಭರಿಸಿದ್ದಳು. ಕಾರು ಖರೀದಿಯ ಮೇಲೆ ಇಎಂಐ ಪಾವತಿಸುವುದಾಗಿ ಆದರ್ಶ್ ಭರವಸೆ ನೀಡಿದ್ದನಂತೆ. ಆದ್ದರಿಂದ ರಸಿಕಾ ಕ್ರೆಡಿಟ್ ಕಾರ್ಡ್‌ನಿಂದ ಒಟ್ಟು 3 ಲಕ್ಷ ರೂ. ಸಾಲ ಪಡೆದುಕೊಳ್ಳಲಾಗಿದೆ. ಜೊತೆಗೆ 2.75 ಲಕ್ಷ ರೂ. ವೈಯಕ್ತಿಕ ಸಾಲವನ್ನೂ ತೆಗೆದುಕೊಳ್ಳಲಾಗಿದೆ. ಆಕೆ ಲೋನ್ ಆ್ಯಪ್ ಮೂಲಕ ಸಾಲವನ್ನೂ ಪಡೆದಿದ್ದಳು.
ಆದರೆ, ಆದರ್ಶ್ ಇಎಂಐ ಪಾವತಿಸಲು ವಿಫಲವಾದಾಗ ಒತ್ತಡಕ್ಕೆ ಒಳಗಾಗಿದ್ದಳು ಎಂದು ಆಕೆಯ ತಾಯಿ ಹೇಳಿದ್ದಾರೆ. ಈ ಬಗ್ಗೆ ರಸಿಕಾ ಆದರ್ಶ್ ನೊಂದಿಗೆ ಜಗಳವಾಡಿದ್ದಳು. ಆದರೆ, ಮೆನನ್ ಮಾತ್ರ ಇಎಂಐ ಕಟ್ಟಲು ಒಪ್ಪಲೇ ಇಲ್ಲ. ಪರಿಣಾಮ ಮನನೊಂದ ರಸಿಕಾ, ಆದರ್ಶ್ ಅಜಯ್ ಮೆನನ್ ಫ್ಲಾಟ್ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಯ ತಾಯಿ ನೀಡಿರುವ ದೂರಿನನ್ವಯ ಆದರ್ಶ್‌ನನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.