-->
ಒಳಉಡುಪು ಕಳವುಗೈಯ್ಯುತ್ತಿದ್ದ ಯುವಕನ ಹಿಡಿದು ತಪರಾಕಿ ನೀಡಿ, ಚಪ್ಪಲಿ ಹಾರ ಹಾಕಿ ಮೂತ್ರ ಕುಡಿಸಿದ ಮಹಿಳೆ

ಒಳಉಡುಪು ಕಳವುಗೈಯ್ಯುತ್ತಿದ್ದ ಯುವಕನ ಹಿಡಿದು ತಪರಾಕಿ ನೀಡಿ, ಚಪ್ಪಲಿ ಹಾರ ಹಾಕಿ ಮೂತ್ರ ಕುಡಿಸಿದ ಮಹಿಳೆ

ಮಧ್ಯಪ್ರದೇಶ: ಮಹಿಳೆಯರ ಒಳಉಡುಪು ಕಳವು ಮಾಡುತ್ತಿದ್ದ ಯುವಕ ಸಿಕ್ಕಿಬಿದ್ದಿದ್ದು, ಮಹಿಳೆಯೊಬ್ಬಳು ಆತನನ್ನು ಹಿಡಿದು ಚೆನ್ನಾಗಿ ತಪರಾಕಿ ನೀಡಿ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿ ಮೂತ್ರ ಕುಡಿಸಿದ್ದಾಳೆ. ಈ ವಿಚಿತ್ರ ಘಟನೆ ಮಧ್ಯಪ್ರದೇಶದ ಛಿಂದ್ವಾರದಲ್ಲಿ ನಡೆದಿದೆ.

ಸೆ. 4ರಂದು ಈ ಘಟನೆ ನಡೆದಿದೆ. ಇದರ ವಿಡಿಯೋ ಕೂಡ ವೈರಲ್ ಆಗಿದೆ. ವಾಮಾಚಾರಕ್ಕಾಗಿ ಮಹಿಳೆಯರ ಒಳಉಡುಪು ಹಾಗೂ ಬಟ್ಟೆಗಳನ್ನು ಯುವಕ ಕದಿಯುತ್ತಿದ್ದ ಎಂದು ಗ್ರಾಮಸ್ಥರು ಆರೋಪಿಸಿದ್ದು, ಪೊಲೀಸರು ಆತನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. 

ಮಹಿಳೆಯೊಬ್ಬಳು ಹಾಗೂ ಗ್ರಾಮಸ್ಥರು ಮೊದಲು ಯುವಕನ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಚಪ್ಪಲಿ ಹಾರ ಹಾಕಿ ಮೆರವಣಿಗೆ ಮಾಡಿ, ಬಾಟಲಿಯಲ್ಲಿದ್ದ ಮೂತ್ರ ಕುಡಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಯುವಕನ ಸಹೋದರಿ ತಿಳಿಸಿದ್ದಾಳೆ.

ಯುವಕನು ಕಳೆದ ಎರಡು ಮೂರು ತಿಂಗಳಿನಿಂದ ವಾಮಾಚಾರಕ್ಕಾಗಿ ಮಹಿಳೆಯರ ಒಳಉಡುಪು ಮತ್ತು ಬಟ್ಟೆಗಳನ್ನು ಕಳವು ಮಾಡುತ್ತಿದ್ದಾನೆಂದು ಅನುಮಾನವಿತ್ತು. ಈ ಕುರಿತಂತೆ ಗ್ರಾಮಸ್ಥರು ನಿಗಾ ಇರಿಸಿದ್ದು, ಆತ ಕಳವು ಮಾಡುತ್ತಿದ್ದಾಗಲೇ ಹಿಡಿಯಲಾಗಿದೆ ಎಂದು ಸಾರ್ವಜನಿಕರು ಹೇಳಿದ್ದಾರೆ.

Ads on article

Advertise in articles 1

advertising articles 2

Advertise under the article