ಕೊನೆಗೂ ಮಂಗಳೂರು ವಿವಿಯ ಮಂಗಳಾ ಸಭಾಂಗಣದಲ್ಲಿ ಗಣೇಶ ಪ್ರತಿಷ್ಟಾಪನೆ- ಮೂರ್ತಿ ಸಣ್ಣದಾಯಿತೆಂದ ಕಲ್ಲಡ್ಕ ಪ್ರಭಾಕರ ಭಟ್!
Tuesday, September 19, 2023
ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಗಣೇಶ ಪ್ರತಿಷ್ಟಾಪನೆ ಕೊನೆಗೂ ಮಂಗಳಾ ಸಭಾಂಗಣದಲ್ಲಿ ನಡೆದು ವಿವಾದ ಸುಖಾಂತ್ಯ ಕಂಡಿದೆ.
ಹಿಂದೆ ಪುರುಷರ ಹಾಸ್ಟೆಲ್ ನಲ್ಲಿ ನಡೆಯುತ್ತಿದ್ದ ಗಣೇಶ ಪ್ರತಿಷ್ಟಾಪನೆ ಯನ್ನು ಇತ್ತೀಚೆಗೆ ಮಂಗಳಾ ಸಭಾಂಗಣದಲ್ಲಿ ನಡೆಸಲಾಗುತ್ತಿತ್ತು. ಇದರ ವೆಚ್ಚವನ್ನು ಮಂಗಳೂರು ವಿಶ್ವವಿದ್ಯಾನಿಲಯ ಭರಿಸಿದ್ದು,ಇದಕ್ಕೆ ಅಡಿಟಿಂಗ್ ವೇಳೆ ಆಕ್ಷೇಪ ವ್ಯಕ್ತವಾಗಿತ್ತು.
ಈ ಹಿನ್ನೆಲೆಯಲ್ಲಿ ಕುಲಪತಿ ಜಯರಾಜ್ ಅಮೀನ್ ಈ ಬಾರಿ ಪುರುಷರ ಹಾಸ್ಟೆಲ್ ನಲ್ಲಿ ಗಣೇಶ ಪ್ರತಿಷ್ಟಾಪನೆ ನಡೆಸಲು ನಿರ್ಧರಿಸಿದ್ದರು. ಆದರೆ ಇದಕ್ಕೆ ಹಿಂದೂ ಸಂಘಟನೆಗಳಿಂದ ಆಕ್ಷೇಪ ವ್ಯಕ್ತವಾಗಿತ್ತು. ಈ ಬಗ್ಗೆ ಕುಲಪತಿ ಸರಕಾರದ ಸಲಹೆ ಕೇಳಿದ್ದರು. ಆ ಬಳಿಕ ಕುಲಪತಿ ಮಂಗಳಾ ಸಭಾಂಗಣದಲ್ಲಿ ಗಣೇಶ ಪ್ರತಿಷ್ಟಾಪನೆ ಗೆ ಅನುಮತಿ ನೀಡಿದ್ದರು.
ಅದರಂತೆ ಇಂದು ಮಂಗಳಾ ಸಭಾಂಗಣದಲ್ಲಿ ಗಣೇಶ ಪ್ರತಿಷ್ಟಾಪನೆ ನಡೆದಿದೆ. ಕುಲಪತಿ ಜಯರಾಜ್ ಅಮೀನ್ ಧಾರ್ಮಿಕ ವಿಧಿವಿಧಾನಗಳೊಂದಿಗೆ ಗಣೇಶ ಮೂರ್ತಿ ಪ್ರತಿಷ್ಟಾಪನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಈ ಕಾರ್ಯಕ್ರಮ ದಲ್ಲಿ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಸೇರಿದಂತೆ ಹಿಂದೂ ಮುಖಂಡರುಗಳು ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಸಣ್ಣ ಗಣೇಶ ನ ಮೂರ್ತಿ ಪ್ರತಿಷ್ಟಾಪನೆ ಮಾಡಲಾಗಿದೆ. ಮುಂದೆ ದೊಡ್ಡದು ಮಾಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.