2.5ಲಕ್ಷ ರೂ. ಮೌಲ್ಯದ ಚಿನ್ನದ ಸರ ತಿಂದ ಎಮ್ಮೆ: ಮುಂದಾಗಿದ್ದೇನು ಗೊತ್ತೇ?
Sunday, October 1, 2023
ನವದೆಹಲಿ: ಎಮ್ಮೆಯೊಂದು ಮೂರುವರೆ ತೊಲದ ಸುಮಾರು 2.5 ಲಕ್ಷ ರೂ. ಮೌಲ್ಯದ ಚಿನ್ನದ ಸರವನ್ನು ತಿಂದಿರುವ ವಿಚಿತ್ರ ಪ್ರಕರಣವೊಂದು ನಾಗ್ಪುರದ ಮಾವಾಶಿಮ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ಮಾವಾಶಿಮ್ ಜಿಲ್ಲೆಯ ಸರ್ಸಿ ಗ್ರಾಮದಲ್ಲಿ ಮಹಿಳೆಯೊಬ್ಬರು ಎಮ್ಮೆಗೆ ಸೋಯಾಬೀನ್ ಸಿಪ್ಪೆಯನ್ನು ಆಹಾರವಾಗಿ ನೀಡಿದ್ದರು. ಈ ವೇಳೆ ಮಹಿಳೆಯ ಕತ್ತಿಲ್ಲಿದ್ದ ಸರ ಆಕಸ್ಮಿಕವಾಗಿ ಕಳಚಿ ಬಿದ್ದಿದೆ. ಆಗ ಎಮ್ಮೆ ತನಗೆ ನೀಡಿದ ಆಹಾರ ಜತೆಗೆ ಬೆಲೆ ಬಾಳುವ ಚಿನ್ನದ ಸರವನ್ನು ತಿಂದಿದೆ. ಮಧ್ಯಾಹ್ನದ ವೇಳೆಗೆ ತನ್ನ ಚಿನ್ನದ ಸರ ನಾಪತ್ತೆಯಾಗಿರುವುದು ತಿಳಿದು ಬಂದಿದೆ. ಮೊದಲಿಗೆ ಸರ ಕಳುವಾಗಿದೆ ಎಂದು ಆಕೆ ಭಾವಿಸಿದ್ದರು. ಸಾಕಷ್ಟು ಹುಡುಕಿದರೂ ಸರ ಪತ್ತೆಯಾಗಿರಲಿಲ್ಲ. ಆ ಬಳಿಕ ಮಹಿಳೆಗೆ ತನ್ನ ಸರ ಎಮ್ಮೆಗೆ ಆಹಾರ ಹಾಕುವಾಗ ಅದರಲ್ಲಿ ಬಿದ್ದಿರುವುದು ನೆನಪಾಗಿದೆ. ಆದ್ದರಿಂದ ಆಕೆಯ ಪತಿ ಎಮ್ಮೆಯನ್ನು ಸ್ಥಳೀಯ ಪಶುವೈದ್ಯರ ಬಳಿಗೆ ಕರೆದೊಯ್ದಿದ್ದಾರೆ.
ಗ್ರಾಮದ ಪಶುವೈದ್ಯ ಡಾ.ಜ್ಞಾನೇಶ್ವರ ಇಧೋಳೆ ಎಮ್ಮೆಯನ್ನು ವಾಶಿಮ್‌ಗೆ ಕೊಂಡೊಯ್ಯಲು ಹೇಳಿದ್ದಾರೆ. ಅಲ್ಲಿ ಅನುಭವಿ ಪಶುವೈದ್ಯ ಡಾ.ಕೌಂಡಿನ್ಯ ಎಮ್ಮೆಯ ಹೊಟ್ಟೆಯನ್ನು ಪರೀಕ್ಷಿಸಿದ್ದಾರೆ. ಡಾ.ಕೌಂಡಿನ್ಯ ಮತ್ತು ಅವರ ತಂಡವು ಆರಂಭದಲ್ಲಿ ಲೋಹ ಶೋಧಕವನ್ನು ಬಳಸಿ ಎಮ್ಮೆಯ ಹೊಟ್ಟೆಯೊಳಗೆ ಲೋಹ ಇರುವುದನ್ನು ದೃಢಪಡಿಸಿದ್ದಾರೆ. ಬಳಿಕ ಅದರ ನಿಖರವಾದ ಸ್ಥಳವನ್ನು ಖಚಿತಪಡಿಸಲು ಸೋನೋಗ್ರಫಿಯನ್ನು ಮಾಡಿದ್ದಾರೆ. ನಂತರ ಎಮ್ಮೆಯ ಹೊಟ್ಟೆ ಶಸ್ತ್ರಚಿಕಿತ್ಸೆ ಮಾಡಿ ಚಿನ್ನದ ಸರವನ್ನು ಯಶಸ್ವಿಯಾಗಿ ಹಿಂಪಡೆದ್ದಾರೆ.
ನಗರ ಪ್ರದೇಶಗಳಲ್ಲಿ ಪ್ಲಾಸ್ಟಿಕ್, ಲೋಹ, ನಾಣ್ಯ ಸೇರಿದಂತೆ ಹಲವು ಅಪಾಯಕಾರಿ ವಸ್ತುಗಳನ್ನು ತಿಂದಿರುವ ದೇಸಿ ಹಸುಗಳಿಗೆ ಶಸ್ತ್ರ ಚಿಕಿತ್ಸೆ ಮಾಡುವುದು ಮಾಮೂಲಿ. ಆದರೆ, 2.5 ಲಕ್ಷ ರೂ. ಮೌಲ್ಯದ ಚಿನ್ನವನ್ನು ತಿಂದಿರುವ ಎಮ್ಮೆಯ ವಿಶಿಷ್ಟ ಪ್ರಕರಣ ಇದಾಗಿದೆ ಎಂದು ತಿಳಿಸಿದ್ದಾರೆ ಶಸ್ತ್ರಚಿಕಿತ್ಸೆ ಮಾಡಿರುವ ವೈದ್ಯರು ತಿಳಿಸಿದ್ದಾರೆ.