ಗುರುವಿನ ಕೃಪೆಯಿಂದ ಈ 3 ರಾಶಿಯವರಿಗೆ ಶ್ರೀಮಂತರಾಗುವ ಯೋಗ ಪ್ರಾಪ್ತಿ!
Tuesday, October 24, 2023
ಮೇಷ ರಾಶಿ
ಮೇಷ ರಾಶಿಯ ಮೊದಲ ಮನೆಯಲ್ಲಿ ಗುರು ವಕ್ರ ಆಗಿರುತ್ತದೆ. ಇದರಿಂದ ಮೇಷ ರಾಶಿಯವರು ಗುರು ಭಗವಾನ್ ಕೃಪೆಯಿಂದ ಶ್ರೀಮಂತರಾಗುವ ಸಾಧ್ಯತೆ ಇದೆ. ವೃತ್ತಿ ಮತ್ತು ವ್ಯಾಪಾರದಲ್ಲಿ ಅನಿರೀಕ್ಷಿತ ಸುಧಾರಣೆ ಕಾಣುವರು. ಹೂಡಿಕೆ ಮಾಡಿದರೆ ಅದರಿಂದ ಅಧಿಕ ಲಾಭ ಸಿಗುತ್ತದೆ. ಕುಟುಂಬದ ಸದಸ್ಯರ ಅಗತ್ಯಗಳನ್ನು ಉತ್ತಮವಾಗಿ ಪೂರೈಸುವಿರಿ.
ತುಲಾ ರಾಶಿ
ತುಲಾ ರಾಶಿಯ 7ನೇ ಮನೆಯಲ್ಲಿ ಗುರು ವಕ್ರ ಆಗಿರುತ್ತದೆ. ಹೀಗಾಗಿ ಡಿಸೆಂಬರ್ ವರೆಗಿನ ಅವಧಿಯನ್ನು ಈ ರಾಶಿಯವರಿಗೆ ಮಂಗಳಕರ ಅವಧಿ ಎಂದು ಹೇಳಬಹುದು. ಏಕೆಂದರೆ ಗುರು ಗ್ರಹ ಪರಿಪೂರ್ಣ ಅನುಗ್ರಹದಿಂದ ಈ ರಾಶಿಚಕ್ರದವರು ಉತ್ತಮ ಹಣದ ಹರಿವನ್ನು ಪಡೆಯಬಹುದು. ಎಲ್ಲ ಕ್ಷೇತ್ರಗಳಲ್ಲೂ ನಿರೀಕ್ಷಿತ ಲಾಭ ದೊರೆಯಲಿದೆ.
ಮೀನ ರಾಶಿ
ಮೀನ ರಾಶಿಯ ಅಧಿಪತಿಯಾದ ಗುರು ಗ್ರಹ 2ನೇ ಮನೆಯಲ್ಲಿ ಸ್ಥಿತನಿದ್ದಾನೆ. ಇದು ಡಿಸೆಂಬರ್ ವೇಳೆಗೆ ಈ ರಾಶಿಗಳ ಆರ್ಥಿಕ ಸ್ಥಿತಿಯನ್ನು ದ್ವಿಗುಣಗೊಳಿಸುತ್ತದೆ. ವಿವಾಹಿತರ ಜೀವನ ಸುಖಮಯವಾಗಿರುತ್ತದೆ. ಉದ್ಯೋಗಾಕಾಂಕ್ಷಿಗಳಿಗೆ ಉತ್ತಮ ಸಂಬಳದೊಂದಿಗೆ ಕೆಲಸ ಸಿಗಲಿದೆ. ವಿದೇಶಕ್ಕೆ ಹೋಗುವ ಆಸೆ ಈಡೇರಲಿದೆ. ನೀವು ಆರೋಗ್ಯ ಸಮಸ್ಯೆಗಳಿಂದ ಮುಕ್ತರಾಗುತ್ತೀರಿ.