ಆಳ್ವಾಸ್ ಪ್ರಗತಿ-2023: ಇಂದಿನಿಂದ ಎರಡು ದಿನಗಳ ಉದ್ಯೋಗ ಮೇಳ
ಆಳ್ವಾಸ್ ಪ್ರಗತಿ-2023: ಇಂದಿನಿಂದ ಎರಡು ದಿನಗಳ ಉದ್ಯೋಗ ಮೇಳ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಅಕ್ಟೋಬರ್ 6 ಮತ್ತು 7ರಂದು ಬೃಹತ್ ಉದ್ಯೋಗ ಮೇಳ ನಡೆಯಲಿದ್ದು, ಆಳ್ವಾಸ್ ಪ್ರಗತಿ-2023 ಎಂಬ ಈ ಉದ್ಯೋಗ ಮೇಳದಲ್ಲಿ 13605 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಂಗಳೂರಿನಲ್ಲಿ ಈ ವಿಷಯ ತಿಳಿಸಿದ್ದಾರೆ.
ಮೂಡಬಿದರೆಯ ಆಳ್ವಾಸ್ ವಿದ್ಯಗಿರಿಯ ಆವರಣದಲ್ಲಿ ಈ ಉದ್ಯೋಗ ಮೇಳ ನಡೆಯಲಿದೆ. ಈ ಬೃಹತ್ ಮೇಳದಲ್ಲಿ ಗಲ್ಫ್‌ನ ಎಕ್ಸ್‌ಪರ್ಟೈಸ್ ಮತ್ತು ಬುರ್ಜಿಲ್ ಹೋಲ್ಡಿಂಗ್, ದುಬೈನಾ ಭವಾನಿ ಗ್ರೂಪ್ ಸಹಿತ ವಿವಿಧ ಕಂಪೆನಿಗಳು ಉತ್ತಮ ಪ್ಯಾಕೇಜ್‌ನೊಂದಿಗೆ ಪದವೀಧರರನ್ನ ನೇಮಕಾತಿ ಮಾಡಿಕೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಸುಮಾರು 25 ವಿವಿಧ ಕಂಪೆನಿಗಳು 250ಕ್ಕೂ ಹೆಚ್ಚು ಉದ್ಯೋಗಗಳನ್ನು ಮೆಕಾನಿಕಲ್ ಪದವೀಧರರಿಗೆ ನೀಡಲಿದೆ.
15 ವಿವಿಧ ಕಂಪೆನಿಗಳು ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ ಪದವೀಧರ ವಿದ್ಯಾರ್ಥಿಗಳಿಗೆ 52ಕ್ಕೂ ಹೆಚ್ಚು ಉದ್ಯೋಗಗಳನ್ನು ನೀಡಲಿದೆ.
ಇದೇ ರೀತಿ 1700 ಹುದ್ದೆಗಳನ್ನು ಐಸ್ ಡಿಸೈನರ್ಸ್, ಏಸ್ ಮ್ಯಾನುಫ್ಯಾಕ್ಚರಿಂಗ್ ಸಿಸ್ಟಮ್, ಟೊಯೊಟಾ, ಬುಲ್ಲರ್ ಇಂಡಿಯಾ, ಸ್ವಿಚ್ ಗೇರ್, ಆಜಾಕ್ಸ್ ಎಂಜಿನಿಯರಿಂಗ್ ಮೊದಲಾದ ಪ್ರತಿಷ್ಠಿತ ಕಂಪೆನಿಗಳು ಆಳ್ವಾಸ್ ಪ್ರಗತಿ 2023 ಉದ್ಯೋಗ ಮೇಳದಲ್ಲಿ ಭಾಗಿಯಾಗಲಿದೆ.
ಇದೇ ರೀತಿ, ಆರೋಗ್ಯ ಕ್ಷೇತ್ರ, ಆಭರಣ ಮಾರಾಟ, ಬ್ಯಾಂಕಿಂಗ್ ಮತ್ತು ವಿಮಾ ವಲಯದ ಕಂಪೆನಿಗಳೂ ಉದ್ಯೋಗದಾತರಾಗಿ ಈ ಉತ್ಸವದಲ್ಲಿ ಭಾಗವಹಿಸಲಿದ್ದಾರೆ ಎಂದು ವಿವೇಕ್ ಆಳ್ವ ವಿವರ ನೀಡಿದರು.