-->
ಕಂಠಪೂರ್ತಿ ತಿಂದ್ಮೇಲೆ ಬಿಲ್ ಬರುತ್ತಿದ್ದಂತೆ ಹಾರ್ಟ್ ಅಟ್ಯಾಕ್ ನಾಟಕವಾಡುತ್ತಿದ್ದ ಖತರ್ನಾಕ್ ವ್ಯಕ್ತಿಯ ಕಂಬಿ ಹಿಂದೆ ಕಳಿಸಿದ ಪೊಲೀಸ್

ಕಂಠಪೂರ್ತಿ ತಿಂದ್ಮೇಲೆ ಬಿಲ್ ಬರುತ್ತಿದ್ದಂತೆ ಹಾರ್ಟ್ ಅಟ್ಯಾಕ್ ನಾಟಕವಾಡುತ್ತಿದ್ದ ಖತರ್ನಾಕ್ ವ್ಯಕ್ತಿಯ ಕಂಬಿ ಹಿಂದೆ ಕಳಿಸಿದ ಪೊಲೀಸ್


ನವದೆಹಲಿ: ಹೊಟೇಲ್​​ಗೆ ಬಂದು ಹೊಟ್ಟೆತುಂಬ ಉಂಡು - ತಿಂದು ಬಿಲ್ ಕೊಡುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಹೊಟ್ಟೆ ತುಂಬಾ ತಿಂದ ಮೇಲೆ ಬಿಲ್ ಪಾವತಿಸಲು ಆಗುತ್ತದೆಂದು ಬರೋಬ್ಬರಿ 20 ರೆಸ್ಟೋರೆಂಟ್ ಮಾಲಕರ ಮುಂದೆ ನಾಟಕವಾಡಿ ಇದೀಗ ಸಿಕ್ಕಿ ಬಿದ್ದಿದ್ದಾನೆ.

ಸ್ಪ್ಯಾನಿಷ್ ವ್ಯಕ್ತಿ ಒಂದಲ್ಲ ಎರಡಲ್ಲ ಬರೋಬ್ಬರಿ 20 ರೆಸ್ಟೋರೆಂಟ್ ಗೆ ಪಂಗನಾಮ ಹಾಕಿದ್ದಾನೆ. ಈತನನ್ನು ಕೊನೆಗೂ ಪೊಲೀಸರು ಬಂಧಿಸಿದ್ದಾರೆ.

ಈತ ಪ್ರತಿ ಬಾರಿ ಹೊಟೇಲ್​​​ಗೆ ಹೋಗಿ, ಕಂಠಪೂರ್ತಿ ತಿನ್ನುತ್ತಿದ್ದ. ಆದರೆ ಆತ ಬಿಲ್ ಪಾವತಿ ಮಾಡ್ತಿರಲಿಲ್ಲ. ತಿಂಡಿ-ತಿನಿಸುಗಳನ್ನು ಆರ್ಡರ್ ಮಾಡಿ ತಿಂದು ತೇಗುತ್ತಿದ್ದ ಈತ, ಬಿಲ್ ಪಾವತಿಯ ಸಂದರ್ಭದಲ್ಲಿ ತನ್ನ ಆಟ ಶುರು ಮಾಡ್ತಿದ್ದ. ಆತ ಹೃದಯಾಘಾತವಾದಂತೆ ಎದೆಯನ್ನು ಹಿಡಿದುಕೊಂಡು ಇದ್ದಕ್ಕಿದ್ದಂತೆ ಮೂರ್ಛೆ ಹೋದಂತೆ ನಟಿಸುತ್ತಿದ್ದ. ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗ್ತಿತ್ತು. ಇದ್ರಿಂದ ಬಿಲ್ ಪಾವತಿಯನ್ನು ಈತ ತಪ್ಪಿಸಿಕೊಳ್ಳುತ್ತಿದ್ದನು.

ಆದ್ರೆ ಕೊನೆಗೂ ಆತನ ನಾಟಕ ಹೊಟೇಲ್ ಮಾಲಕರಿಗೆ ಗೊತ್ತಾಗಿದೆ. ಈ ವ್ಯಕ್ತಿ ಹೃದಯಾಘಾತ ಎಂದು ನಟಿಸುವ ಮೂಲಕ ಕನಿಷ್ಠ 20 ಹೊಟೇಲ್ ಗೆ ಟೋಪಿ ಹಾಕಿದ್ದಾನೆ. ಒಂದು ಹೊಟೇಲ್ ಮಾಲಿಕರಿಗೆ ಈತ ನಾಟಕವಾಡ್ತಿದ್ದಾನೆ ಎಂಬ ಅನುಮಾನ ಬಂದಿತ್ತು. ಹಾಗಾಗಿ ಆತನ ಫೋಟೋವನ್ನು ಎಲ್ಲ ರೆಸ್ಟೋರೆಂಟ್ ಮಾಲಿಕರಿಗೆ ನೀಡಿದ್ದಲ್ಲದೆ, ಎಚ್ಚರಿಕೆಯಿಂದ ಇರುವಂತೆ ತಿಳಿಸಿದ್ದರು.

ಹಿಂದಿನ ತಿಂಗಳು ವ್ಯಕ್ತಿ ಅಲಿಕಾಂಟೆಯ ಎಲ್ ಬ್ಯೂನ್ ಕಮರ್ ಹೊಟೇಲ್ ಗೆ ಬಂದಿದ್ದಾನೆ. ಅಲ್ಲಿ ಸಮುದ್ರಾಹಾರ ಸೇವಿಸಿದ್ದಲ್ಲದೆ ವಿಸ್ಕಿ ಕುಡಿದಿದ್ದಾನೆ. ಸಿಬ್ಬಂದಿ ಈತನಿಗೆ ಬಿಲ್ ನೀಡಿದ್ದಾರೆ. ಹೊಟೇಲ್ ರೂಮಿನಲ್ಲಿ ಹಣವಿದೆ. ಅಲ್ಲಿಂದ ತರ್ತೇನೆ ಎಂದು ಹೇಳಿದ್ದಾನೆ. ಆದ್ರೆ ಇದನ್ನು ಅವರು ನಿರಾಕರಿಸಿದ್ದಾರೆ. ಸಿಬ್ಬಂದಿ ಮಾತನಾಡ್ತಿರುವಾಗಲೇ ಈತ ಕುರ್ಚಿ ಮೇಲೆ ಕುಸಿದು ಬಿದ್ದಿದ್ದಾನೆ. ಹೃದಯಾಘಾತದ ನಾಟಕವಾಡಿದ್ದಾನೆ. ಈ ವೇಳೆ ಹೊಟೇಲ್ ಸಿಬ್ಬಂದಿ ಪೊಲೀಸ್ ಕರೆಸಿದಾಗ ಈತನ ನಾಟಕ ಬಯಾಲಗಿದೆ. ಎಲ್ಲಾ ಹೊಟೇಲ್ ಮಾಲೀಕರು ಸೇರಿ ಪ್ರಕರಣ ದಾಖಲಿಸುವ ನಿರ್ಧಾರಕ್ಕೆ ಬಂದಿದ್ದಾರೆ.

Ads on article

Advertise in articles 1

advertising articles 2

Advertise under the article