ಮಂಗಳೂರು: ಅಕ್ರಮವಾಗಿ ನೆಲೆಸಿದ್ದ ಇಬ್ಬರು ವಿದೇಶಿಗರು ಅರೆಸ್ಟ್
Sunday, October 22, 2023
ಮಂಗಳೂರು: ವಿದೇಶದಿಂದ ಬಂದು ಲಾಡ್ಜ್ ಒಂದರಲ್ಲಿ ಅನಧಿಕೃತವಾಗಿ ವಾಸ್ತವ್ಯವಿದ್ದ ಇಬ್ಬರು ವಿದೇಶಿ ಪ್ರಜೆಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ನೈಜೀರಿಯಾದ ಅಂಕಿಟೋಲ ಮತ್ತು ಘಾನ ದೇಶದ ಸಲಾಂ ಕ್ರಿಸ್ತಿಯನ್ ಬಂಧಿತ ಆರೋಪಿಗಳು.
ಇವರಿಬ್ಬರು ಸ್ನೇಹಿತ ಅನಿಲ್ ಡಿಸಿಲ್ವಾ ಎಂಬಾತನ ಮನೆಯ ಕಾರ್ಯಕ್ರಮಕ್ಕೆ ವಿದೇಶದಿಂದ ಬಂದಿದ್ದರು. ಮಂಗಳೂರಿಗೆ ಬಂದಿದ್ದ ಇವರು ತಮ್ಮ ವೀಸಾದ ಅವಧಿ ಮುಗಿದಿದ್ದರೂ ತಮ್ಮ ದೇಶಕ್ಕೆ ತೆರಳದೆ ಭಾರತದಲ್ಲಿ ವಾಸವಾಗಿದ್ದರು. ಇವರ ವೀಸಾ ಪರಿಶೀಲನೆ ಮಾಡಿದಾಗ ಇಬ್ಬರೂ 2018ರ ಬಳಿಕ ಸೂಕ್ತ ವೀಸಾ ಇಲದೆ ಬೆಂಗಳೂರಿನಲ್ಲಿ ವಾಸವಿದ್ದಾರೆ ಎಂದು ತಿಳಿದು ಬಂದಿದೆ. ಇವರನ್ನು ಬಂಧಿಸಿ ಬೆಂಗಳೂರಿನ FRRO (Foreigners Regional Registration Office) ಮುಂದೆ ಹಾಜರುಪಡಿಸಲಾಗಿದ್ದು ಅವರನ್ನು ಡಿಟೆನ್ಷನ್ ಸೆಂಟರ್ ಗೆ ರವಾನಿಸಲು ಆದೇಶಿಸಲಾಗಿದೆ.