ಪಡೆದ ಸಾಲ ಏಳು ಸಾವಿರವನ್ನು ಹಿಂದಿರುಗಿಸಲು ಪತಿ ವಿಫಲ : ಪತ್ನಿಯನ್ನು ಅಪಹರಿಸಿ ಮುಖಕ್ಕೆ ಗುದ್ದಿದ ಇಬ್ಬರು ಅರೆಸ್ಟ್
Monday, October 23, 2023
ಮಂಗಳೂರು: ಪಡೆದ ಸಾಲ ಹಿಂದಿರುಗಿಸಲು ಪತಿ ವಿಫಲನಾದ ಎಂದು ಪತ್ನಿಯನ್ನು ಅಪಹರಿಸಿದ ನಾಲ್ವರ ಗ್ಯಾಂಗ್ನ ಇಬ್ಬರು ಮಹಿಳೆಯರು ಆಕೆಗೆ ಹಣ ಕೊಡುವಂತೆ ಪೀಡಿಸಿ, ಮುಖಕ್ಕೆ ಮೆಟಲ್ ಬಳೆಯಿಂದ ಗುದ್ದಿದ ಘಟನೆ ಚೆಂಬೂರಿನ ಚೆಡ್ಡಾ ನಗರದಲ್ಲಿ ವರದಿಯಾಗಿದೆ.
ಸಂತ್ರಸ್ತೆಯ ಪತಿ 7,000 ರೂ. ಪಡೆದ ಸಾಲವನ್ನು ಹಿಂದಿರುಗಿಸಲು ವಿಫಲನಾಗಿದ್ದ. ಇದನ್ನೇ ನೆಪವಾಗಿರಿಸಿಕೊಂಡ ನಾಲ್ವರು ಆತನ ಪತ್ನಿಯನ್ನು ಅಪಹರಿಸಿ, ಚಿತ್ರಹಿಂಸೆ ನೀಡಿದ್ದಾರೆ. ಬಳಿಕ ಆಕೆಯ ಮುಖಕ್ಕೆ ಬಳೆಯಿಂದ ಗುದ್ದಿದ್ದಾರೆ ಎನ್ನಲಾಗಿದೆ. ನಾಲ್ಕು ಜನರ ಗುಂಪು ಅಪಹರಿಸಿ ಹಲ್ಲೆ ನಡೆಸಿದರು ಎಂದು ಹಲ್ಲೆಗೊಳಗಾದ ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದರು. ದೂರಿನ ಅನ್ವಯ ಪೊಲೀಸರು ಇಬ್ಬರನ್ನು ಸದ್ಯ ಬಂಧಿಸಿದ್ದಾರೆ.
ಸಂತ್ರಸ್ತೆಯ ಪ್ರಕಾರ, ಅಕ್ಟೋಬರ್ 19 ರಂದು ಇಬ್ಬರು ಮಹಿಳೆಯರು ಸೇರಿದಂತೆ ನಾಲ್ವರು ಚೆಂಬೂರಿನ ಚೆಡ್ಡಾ ನಗರದಲ್ಲಿನ ಆಕೆಯ ಮನೆಗೆ ನುಗ್ಗಿದ್ದಾರೆ. ನಿನ್ನ ಪತಿ ತಮ್ಮಿಂದ ಸಾಲ ಪಡೆದು ಅದನ್ನು ಹಿಂತಿರುಗಿಸಿಲ್ಲ. ಹಣ ಕೊಡು ಎಂದು ಒತ್ತಾಯಿಸಿದ್ದಾರೆ. ಆಕೆ ತನ್ನ ಬಳಿ ಹಣವಿಲ್ಲ ಎಂದು ಹೇಳಿದಾಗ, ವೈಯಕ್ತಿಕವಾಗಿ ಮಹಿಳೆಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಬೆನ್ನಲ್ಲೇ ಪತಿ ಮತ್ತು ಪತ್ನಿ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರನ್ನು ಆಧರಿಸಿ ಸಬಾ ಮತ್ತು ಅಫ್ರೀನ್ ಎಂಬುವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಉಳಿದ ಇಬ್ಬರು ಆರೋಪಿಗಳು ಪರಾರಿಯಾಗಿದ್ದು, ಇಬ್ಬರನ್ನು ಶೀಘ್ರವೇ ಪತ್ತೆಹಚ್ಚಿ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಆರೋಪಿಗಳ ವಿರುದ್ಧ ಸೆಕ್ಷನ್ 363 (ಅಪಹರಣ), 354 (ಮಹಿಳೆಯೊಬ್ಬಳ ಮೇಲೆ ಆಕೆಯ ನಮ್ರತೆಗೆ ದೌರ್ಜನ್ಯ ಅಥವಾ ಕ್ರಿಮಿನಲ್ ಬಲ), 409 (ವ್ಯಾಪಾರಿ ಅಥವಾ ಏಜೆಂಟರಿಂದ ಕ್ರಿಮಿನಲ್ ನಂಬಿಕೆ ಉಲ್ಲಂಘನೆ ), 452 (ಗಾಯ, ಆಕ್ರಮಣ ಅಥವಾ ತಪ್ಪಾದ ಸಂಯಮದ ತಯಾರಿಯ ನಂತರ ಮನೆ-ಅತಿಕ್ರಮಣ), 324 (ಅಪಾಯಕಾರಿ ಶಸ್ತ್ರಾಸ್ತ್ರಗಳಿಂದ ಸ್ವಯಂಪ್ರೇರಣೆಯಿಂದ ಗಾಯವನ್ನು ಉಂಟುಮಾಡುವುದು) ಮತ್ತು ಭಾರತೀಯ ದಂಡ ಸಂಹಿತೆಯ 34 (ಸಾಮಾನ್ಯ ಉದ್ದೇಶ) ದಾಖಲಿಸಿದ್ದಾರೆ.