ಅಧಿಕಾರ ದುರ್ಬಳಕೆ ಮಾಡಿರುವ ಆರೋಪ ಕೊಪ್ಪಳ ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ಸೇವೆಯಿಂದ ವಜಾ
Sunday, October 1, 2023
ಕೊಪ್ಪಳ: ತನ್ನ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡ ಹಿನ್ನೆಲೆಯಲ್ಲಿ ಕೊಪ್ಪಳ ಜಿಲ್ಲಾ ಅಗ್ನಿಶಾಮಕ ಅಧಿಕಾರಿಯ ಸೇವೆಯಿಂದಲೇ ವಜಾಗೊಂಡಿದ್ದಾನೆ.
ಕೆ.ಎಂ.ಸಿದ್ದೇಶ್ವರ ವಜಾಗೊಂಡ ಅಗ್ನಿಶಾಮಕದಳದ ಅಧಿಕಾರಿ. ಈತನ ಮೇಲೆ ನಕಲಿ ದಾಖಲೆಯನ್ನು ಸೃಷ್ಟಿಸಿ ಸರ್ಕಾರದ ಬೊಕ್ಕಸಕ್ಕೆ ನಷ್ಟ ಮಾಡುವ ಮೂಲಕ ಅಧಿಕಾರ ದುರ್ಬಳಕೆ ಮಾಡಿಕೊಂಡಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಸೇವೆಯಿಂದ ವಜಾಗೊಳಿಸಿ ರಾಜ್ಯ ಅಗ್ನಿಶಾಮಕದಳದ ಡಿಜಿಯಿಂದ ಆದೇಶ ಹೊರಡಿಸಲಾಗಿದೆ.
ಅಧಿಕಾರ ವ್ಯಾಪ್ತಿಯನ್ನು ಮೀರಿ ಫೈರ್ ನೀರಪೇಕ್ಷಣಾ ಪತ್ರ ನೀಡುವುದು, ನೂತನ ಕಟ್ಟಡಗಳು ಹಾಗೂ ಆಸ್ಪತ್ರೆಗಳಿಗೆ ಎನ್ಒಸಿ ನೀಡುವುದು, ಸಾರ್ವಜನಿಕರಿಂದ ಅತಿಯಾದ ಲಂಚಕ್ಕೆ ಬೇಡಿಕೆ ಇಡುವುದು, ನೀರಪೇಕ್ಷಣಾ ಪ್ರಮಾಣ ಪತ್ರ ನೀಡಿ ಸರ್ಕಾರದ ಬೊಕ್ಕಸಕ್ಕೆ ಹಣ ಜಮಾ ಮಾಡದೆ ನಷ್ಟ ಉಂಟು ಮಾಡಿರುವ ಆರೋಪ ಕೆ.ಎಂ. ಸಿದ್ದೇಶ್ವರನ ಮೇಲಿದೆ.
ಪ್ರಾಥಮಿಕ ತನಿಖೆಯಲ್ಲಿ ಆರೋಪಗಳು ಸಾಬೀತಾದ ಹಿನ್ನಲೆಯಲ್ಲಿ ಅಧಿಕಾರಿ ಕೆ.ಎಂ. ಸಿದ್ದೇಶ್ವರನನ್ನು ಸೇವೆಯಿಂದಲೇ ವಜಾ ಮಾಡಿ ಇಲಾಖೆ ಆದೇಶಿಸಿದೆ.