ಮಂಗಳೂರು: ಮಹೇಶ್ ಮೋಟಾರ್ಸ್ ಬಸ್ ಮಾಲಕ ಆತ್ಮಹತ್ಯೆಗೆ ಶರಣು
Monday, October 2, 2023
ಮಂಗಳೂರು: ಹೆಸರಾಂತ ಮಹೇಶ್ ಮೋಟಾರ್ಸ್ ಬಸ್ ಮಾಲಕ ಪ್ರಕಾಶ್ ಶೇಖ(45) ತಮ್ಮ ಮನೆಯಲ್ಲಿಯೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಂದು ಕದ್ರಿಯ ಅಪಾರ್ಟ್ಮೆಂಟ್ ನಲ್ಲಿ ನಡೆದಿದೆ.
ನಗರದ ಕುಲಶೇಖರ ನಿವಾಸಿಯಾಗಿರುವ ಪ್ರಕಾಶ್ ಶೇಖ ಅವರು ಪತ್ನಿ ಹಾಗೂ ಪುತ್ರಿಯೊಂದಿಗೆ ಕದ್ರಿಯ ಅಪಾರ್ಟ್ಮೆಂಟ್ ನಲ್ಲಿ ವಾಸ್ತವ್ಯವಿದ್ದರು. ಆದರೆ ರವಿವಾರ ಅವರು ತಮ್ಮ ಅಪಾರ್ಟ್‌ಮೆಂಟ್ ನಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬಸ್ ಉದ್ಯಮದ ಬಗ್ಗೆ ಅಪಾರ ಪ್ರೀತಿ ಇರಿಸಿದ್ದ ಪ್ರಕಾಶ್ ಶೇಖ ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿದ್ದಾರೆಂದು ಇನ್ನೂ ತಿಳಿದು ಬಂದಿಲ್ಲ. ಈ ಬಗ್ಗೆ ಅವರ ಪತ್ನಿ ಕದ್ರಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.