ಬಂಟ್ವಾಳ: ಅನ್ಯಕೋಮಿನ ಯುವಕರೊಂದಿಗೆ ಬಸ್ ಸ್ಟ್ಯಾಂಡ್ ನಲ್ಲಿ ಹಿಂದೂ ಯುವತಿ ಪತ್ತೆ - ತಂಡದಿಂದ ನೈತಿಕ ಪೊಲೀಸ್ ಗಿರಿ
Friday, October 13, 2023
ಬಂಟ್ವಾಳ: ಅನ್ಯಕೋಮಿನ ಯುವಕರೊಂದಿಗೆ ಹಿಂದೂ ಯುವತಿಯೊಬ್ಬಳು ಕಂಡು ಯುವಕರ ತಂಡವೊಂದು ನೈತಿಕ ಪೊಲೀಸ್ ಗಿರಿ ಎಸಗಿರುವ ಘಟನೆ ವಿಟ್ಲ ಪೋಲೀಸ್ ಠಾಣಾ ವ್ಯಾಪ್ತಿಯ ಪೆರುವಾಯಿ ಸಮೀಪ ನಡೆದಿದೆ.
ಇಬ್ಬರು ಅನ್ಯಕೋಮಿನ ಯುವಕರೊಂದಿಗೆ ಯುವತಿಯೋರ್ವಳು ತಿರುಗಾಡುತ್ತಿರುವ ಬಗ್ಗೆ ಸಂಶಯದಿಂದ ಸ್ಥಳೀಯರು ವಿಟ್ಲ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಬಂದು ಅವರಲ್ಲಿ ಮಾತನಾಡಿ ಬಳಿಕ ಕಳುಹಿಸಿಕೊಟ್ಟಿದ್ದಾರೆ.
ಮೂವರು ಬಸ್ಸೊಂದರಲ್ಲಿ ಬಂದು ಕುದ್ದುಪದವಿನಲ್ಲಿ ಬಸ್ ನಿಂದ ಇಳಿದು ಅಲ್ಲೇ ಪಕ್ಕದಲ್ಲಿದ್ದ ಬಸ್ಸು ತಂಗುದಾಣದಲ್ಲಿ ಕುಳಿತಿದ್ದರು. ಈ ವೇಳೆ ಸ್ಥಳೀಯರು ಅವರನ್ನು ವಿಚಾರಿಸಿದ್ದಾರೆ. ಉಪ್ಪಳ ಕಡೆ ತೆರಳುವ ಮತ್ತೊಂದು ಬಸ್ಸಿನಲ್ಲಿ ಆ ಮೂವರು ಅಲ್ಲಿಂದ ತೆರಳಿ ಪೆರುವಾಯಿಯಲ್ಲಿ ಬಸ್ ನಿಂದ ಇಳಿದು ಪಕ್ಕದಲ್ಲಿರುವ ಬಸ್ಸು ತಂಗುದಾಣದಲ್ಲಿ ಕುಳಿತಿದ್ದರು.
ಮೂವರು ಬಹಳ ಸಲುಗೆಯಿಂದ ವರ್ತಿಸುವುದನ್ನು ಕಂಡ ಸ್ಥಳೀಯರು ಅವರನ್ನು ವಿಚಾರಿಸಿ ಬಳಿಕ ವಿಟ್ಲ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ವಿಟ್ಲ ಠಾಣಾ ಪೊಲೀಸರು ಆ ಮೂವರನ್ನು ವಶಕ್ಕೆ ಪಡೆದಿರುವುದಾಗಿ ಮಾಹಿತಿ ಲಭಿಸಿದೆ. ಮೂವರೂ ವಿದ್ಯಾರ್ಥಿಗಳಾಗಿದ್ದು, ಕಾಸರಗೋಡಿನ ಪೆರ್ಲ ಆಸುಪಾಸಿನವರಾಗಿದ್ದಾರೆ. ಅವರು ಉಪ್ಪಳ ಕಡೆ ಸುತ್ತಾಡಲು ತೆರಳುವ ಸಲುವಾಗಿ ಬಂದಿರುವುದಾಗಿ ಅವರು ಪೊಲೀಸರಲ್ಲಿ ತಿಳಿಸಿರುವುದಾಗಿ ತಿಳಿದು ಬಂದಿದೆ.