-->
ಪ್ರೇಯಸಿಗೆ ಚೂರಿಯಿಂದ ಇರಿದು ಪರಾರಿಯಾಗಲು ಯತ್ನಿಸಿದ ಪಾಗಲ್ ಪ್ರೇಮಿ - ಆರೋಪಿಯನ್ನು ಹಿಡಿದ ಕ್ಯಾಬ್ ಚಾಲಕ

ಪ್ರೇಯಸಿಗೆ ಚೂರಿಯಿಂದ ಇರಿದು ಪರಾರಿಯಾಗಲು ಯತ್ನಿಸಿದ ಪಾಗಲ್ ಪ್ರೇಮಿ - ಆರೋಪಿಯನ್ನು ಹಿಡಿದ ಕ್ಯಾಬ್ ಚಾಲಕ


ನವದೆಹಲಿ: ತನ್ನನ್ನು ನಿರ್ಲಕ್ಷ್ಯ​ ಮಾಡುತ್ತಿದ್ದಾಳೆಂದು ಪಾಗಲ್ ಪ್ರೇಮಿಯೊಬ್ಬ ಪ್ರೇಯಸಿಗೆ ಮಾರಕಾಯುಧದಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ನವದೆಹಲಿಯ ಲಾಡೋ ಸರಾಯ್ ಪ್ರದೇಶದಲ್ಲಿ ನಡೆದಿದೆ.

ಇರಿತಕ್ಕೊಳಗಾದ 23 ವರ್ಷದ ಯುವತಿಯ ಸ್ಥಿತಿ ಗಂಭಿರವಾಗಿದೆ. ಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಗೌರವ್​ ಪಾಲ್ (27) ಎಂಬಾತನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ತನಿಖೆ ನಡೆಸುತ್ತಿದ್ದಾರೆ.

ಬಂಧಿತ ಆರೋಪಿ ಗೌರವ್ ತನ್ನ ಪ್ರೇಯಸಿ ತನ್ನನ್ನು ನಿರ್ಲಕ್ಷಿಸು​ತ್ತಿದ್ದಾಳೆ ಎಂಬ ಕಾರಣಕ್ಕೆ ಆಕೆಯನ್ನು ಹೆದರಿಸಲು ಹೋಗಿ ಕೃತ್ಯ ಎಸಗಿದ್ದಾನೆ. ಮೊದಲಿಗೆ ಆಕೆಯನ್ನು ಭೇಟಿ ಮಾಡುವ ನೆಪದಲ್ಲಿ ಕರೆಸಿಕೊಂಡ ಆರೋಪಿ ಗೌರವ್ ಪಾಲ್ ಬಳಿಕ ಕ್ಯಾಬ್​ ಒಂದನ್ನು ಬುಕ್​ ಮಾಡಿ ಬೇರೆಡೆಗೆ ತೆರಳೋಣ ಎಂದು ಹೇಳಿದ್ದಾನೆ.

ಕಾರಿನಲ್ಲಿ ಕುಳಿತುಕೊಂಡ ಬಳಿಕ ಆರೋಪಿ ಯುವತಿಗೆ ಚಾಕುವಿನಿಂದ ಇರಿಯಲು ಆರಂಭಿಸಿದ್ದಾನೆ‌. ಬಳಿಕ ಆಕೆಯನ್ನು ಗಾಯಗೊಳಿಸಿ ಪರಾರಿಯಾಗಲು ಯತ್ನಿಸಿದ್ದಾನೆ. ತಕ್ಷಣ ಇದನ್ನು ಗಮನಿಸಿದ ಕ್ಯಾಬ್​ ಚಾಲಕ ಆತನನ್ನು ಸಾರ್ವಜನಿಕರ ಸಹಾಯದೊಂದಿಗೆ ಹಿಡಿದು ಪೊಲೀಸರಿಗೊಪ್ಪಿಸಿದ್ದಾನೆ. ಅಕ್ಟೋಬರ್​ 10ರಂದು ಗಾಯಾಳು ಯುವತಿಯು ಬಂಧಿತ ಆರೋಪಿ ಗೌರವ್ ಪಾಲ್​ ತನಗೆ ಹಣಕಾಸಿನ ವಿಚಾರವಾಗಿ ಕಿರುಕುಳ ನೀಡುತ್ತಿದ್ದಾನೆ ಎಂದು ಕಂಟ್ರೋಲ್​ ರೂಮಿಗೆ ಕರೆ ಮಾಡಿ ದೂರು ದಾಖಲಿಸಿದ್ದಳು.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ವಶಕ್ಕೆ ಪಡೆಯಲಾಗಿದ್ದು, ಆತನ ವಿರುದ್ಧ ಐಪಿಸಿ ಸೆಕ್ಷನ್ 307ರಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Ads on article

Advertise in articles 1

advertising articles 2

Advertise under the article