ಈ ರೀತಿಯಾಗಿ ಪ್ರತಿದಿನ ಪಪ್ಪಾಯ ಹಣ್ಣು ತಿನ್ನುವುದರಿಂದ ಸ್ಲಿಮ್ ಆಗಿ ಸುಂದರವಾಗಿ ಕಾಣೋದು ಖಂಡಿತ!
Tuesday, October 3, 2023
ತೂಕ ನಷ್ಟಕ್ಕೆ ಪಪ್ಪಾಯ :
ಪಪ್ಪಾಯ ಕಡಿಮೆ ಕ್ಯಾಲೋರಿ ಹೊಂದಿರುವ ಹಣ್ಣು. ಇದರಲ್ಲಿ ನೀರು ಮತ್ತು ನಾರಿನಂಶ ಅಧಿಕವಾಗಿದೆ. ತ್ವರಿತವಾಗಿ ತೂಕ ಇಳಿಸಿಕೊಳ್ಳಲು ಬಯಸುವವರು ಪಪ್ಪಾಯವನ್ನು ತಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಬೇಕು. ಪಪ್ಪಾಯದಲ್ಲಿ ಕಡಿಮೆ ಕ್ಯಾಲೋರಿ ಮತ್ತು ಹೆಚ್ಚಿನ ಪೋಷಕಾಂಶಗಳಿವೆ. ಹೆಚ್ಚುತ್ತಿರುವ ತೂಕವನ್ನು ನಿಯಂತ್ರಿಸಲು ಬಯಸುವುದಾದರೆ ಪಪ್ಪಾಯವನ್ನು ಪ್ರತಿದಿನದ ಆಹಾರದಲ್ಲಿ ಸೇರಿಸಿಕೊಳ್ಳಬೇಕು.
ನಿತ್ಯ ಪಪ್ಪಾಯ ಸೇವಿಸುತ್ತಾ ಬಂದರೆ ಹೆಚ್ಚುತ್ತಿರುವ ತೂಕವನ್ನು ನಿಯಂತ್ರಿಸುವುದಲ್ಲದೆ ಬೊಜ್ಜನ್ನು ವೇಗವಾಗಿ ಕಡಿಮೆ ಮಾಡುತ್ತದೆ. ಹೌದು, ಪಪ್ಪಾಯವನ್ನು ತೂಕ ನಷ್ಟಕ್ಕೆ ಅತ್ಯುತ್ತಮ ಹಣ್ಣು ಎಂದು ಪರಿಗಣಿಸಲಾಗಿದೆ. ಹಾಗಾದರೆ ಪಪ್ಪಾಯದ ಸಹಾಯದಿಂದ ತೂಕವನ್ನು ಹೇಗೆ ಕಳೆದುಕೊಳ್ಳಬಹುದು ಎಂಬ ಮಾಹಿತಿ ಇಲ್ಲಿದೆ.
ಪಪ್ಪಾಯ ಅತ್ಯಂತ ಕಡಿಮೆ ಕ್ಯಾಲೋರಿ ಹಣ್ಣು ಎನ್ನುತ್ತಾರೆ ಆರೋಗ್ಯ ತಜ್ಞರು. ಇದರಲ್ಲಿ ನಾರಿನಂಶ ಹೆಚ್ಚಿರುವುದರಿಂದ ಬಹಳ ಸಮಯದ ನಂತರವೂ ಹೊಟ್ಟೆ ತುಂಬಿದ ಹಾಗೆಯೇ ಇರುತ್ತದೆ. ಹಾಗಾಗಿ ಇಡೀ ದಿನ ಬಾಯಿ ಆಡಿಸುತ್ತಿರುವ ಅಗತ್ಯ ಇರುವುದಿಲ್ಲ. ಪಪ್ಪಾಯ ಹಣ್ಣಿನಲ್ಲಿ ಕ್ಯಾಲೋರಿ ಕಡಿಮೆ ಇರುವುದರ ಹೊರತಾಗಿ ಅನೇಕ ವಿಟಮಿನ್ ಗಳೂ ಇವೆ. ಪಪ್ಪಾಯದಲ್ಲಿ ವಿಟಮಿನ್ ಎ, ವಿಟಮಿನ್ ಇ ಮತ್ತು ವಿಟಮಿನ್ ಸಿ ಇದೆ. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.