ಮೂಡುಬಿದಿರೆ: ಗಣಪತಿ ಕಟ್ಟೆಯಲ್ಲಿ ಹಸಿರು ಧ್ವಜವಿಟ್ಟು ಗಲಭೆಗೆತ್ನಿಸಿದ್ದ ಕಿಡಿಗೇಡಿಗಳು - ಪಿಡಿಒವನ್ನು ತರಾಟೆಗೆ ತೆಗೆದುಕೊಂಡ ಸರ್ಕಲ್ ಇನ್ ಸ್ಪೆಕ್ಟರ್
Friday, October 6, 2023
ಮೂಡುಬಿದಿರೆ: ಗಣಪತಿ ಕಟ್ಟೆಯಲ್ಲಿ ಹಸಿರು ಧ್ವಜವಿಟ್ಟು ಕಿಡಿಗೇಡಿಗಳು ಗಲಭೆಗೆ ಯತ್ನಿಸಿದ್ದ ಘಟನೆ ಮೂಡುಬಿದಿರೆಯ ಪುಚ್ಚೆಮೊಗೇರು ಎಂಬಲ್ಲಿ ನಡೆದಿದೆ.
ಈದ್ ಮಿಲಾದ್ ಸಂದರ್ಭ ಶಾಂತಿ ಕದಡುವ ಕಾರ್ಯ ನಡೆದಿದ್ದು, ಮೂಡಬಿದಿರೆಯ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ಮಾಹಿತಿ ಸಿಕ್ಕ ತಕ್ಷಣ ಸ್ಥಳಕ್ಕೆ ಆಗಮಿಸಿ ಹಸಿರು ಧ್ವಜವನ್ನು ತೆರವು ಮಾಡಿದ್ದಾರೆ. ಸೆ.30ರಂದು ಈ ಘಟನೆ ನಡೆದಿದೆ ಎನ್ನಲಾಗಿದೆ. ಆದರೆ ವೀಡಿಯೋ ಘಟನೆ ನಡೆದ ಕೆಲವು ದಿನಗಳ ಬಳಿಕ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ.
ಈದ್ ಮಿಲಾದ್ ದಿನ ಗಣಪತಿ ಕಟ್ಟೆಯಲ್ಲಿ ಹಸಿರುಧ್ವಜವನ್ನು ಕಿಡಿಗೇಡಿಗಳು ಇಟ್ಟಿದ್ದರು. ಈ ಬಗ್ಗೆ ಗಮನಕ್ಕೆ ತಂದರೂ ಹೊಸಬೆಟ್ಟು ಪಿಡಿಓ ಶೇಖರ್ ಬೇಜವಾಬ್ದಾರಿಯಿಂದ ತೆರವು ಮಾಡಿರಲಿಲ್ಲ. ಆದ್ದರಿಂದ
ಪಿಡಿಓ ವರ್ತನೆಗೆ ಮೂಡಬಿದಿರೆಯ ಸರ್ಕಲ್ ಇನ್ಸ್‌ಪೆಕ್ಟರ್ ಸಂದೇಶ್ ಕೆಂಡಾಮಂಡಲವಾಗಿದ್ದಾರೆ.
'ಇದರ ಮೇಲೆ ಬಾವುಟ ಹಾಕಲಿಕ್ಕೆ ಪರ್ಮಿಷನ್ ತೆಗೊಂಡಿದ್ದಾಅರಾ?. ನಿನ್ನ ಕೆಲಸ ಏನೂ ಅಂತ ನಿನಗೆ ಗೊತ್ತಿಲ್ಲ, ಏನ್ ಮಾಡ್ತಾ ಇದೀಯಾ?. ಅವರು ಪರ್ಮಿಷನ್ ತೆಗೊಂಡಿಲ್ಲ ಅಂದ್ರೆ ಪೊಲೀಸ್ ಕಂಪ್ಲೆಟ್ ಕೊಡಬೇಕು. ಮೊದಲು ಇವನನ್ನೇ ಆರೋಪಿ ಮಾಡಬೇಕು. ನಿನ್ನ ಅಧಿಕಾರ ಏನು ಅಂತ ನಿನಗೇ ಗೊತ್ತಿಲ್ಲ. ಸಂಬಂಧ ಇಲ್ಲ ಎಂದು ಹೇಳುವ ನೀನ್ಯಾಕೆ ಪಿಡಿಓ ಆಗಿದ್ದಿ' ಎಂದು ಅಂತ ಪಿಡಿಓ ವಿರುದ್ಧ ಇನ್ಸ್‌ಪೆಕ್ಟರ್ ಕೆಂಡಮಂಡಾಲವಾಗಿದ್ದಾರೆ.
ಬಳಿಕ ಪೊಲೀಸ್ ಸಿಬ್ಬಂದಿ ಮೂಲಕ ಬಾವುಟವನ್ನು ತೆರವು ಮಾಡಿಸಿದ್ದಾರೆ. ಇನ್ಸ್‌ಪೆಕ್ಟರ್ ಸಮಯಪ್ರಜ್ಞೆಯಿಂದ ಭಾರೀ ಸಂಘರ್ಷವೊಂದು ತಪ್ಪಿದಂತಾಗಿದೆ.