-->
ಮಂಗಳೂರು: ರಾಜಕೀಯದಲ್ಲಿ ಶಾಸಕ ಹರೀಶ್ ಪೂಂಜಾ ಇನ್ನೂ ಬಚ್ಚಾ - ಸಿದ್ದರಾಮಯ್ಯ ಟಾಂಗ್

ಮಂಗಳೂರು: ರಾಜಕೀಯದಲ್ಲಿ ಶಾಸಕ ಹರೀಶ್ ಪೂಂಜಾ ಇನ್ನೂ ಬಚ್ಚಾ - ಸಿದ್ದರಾಮಯ್ಯ ಟಾಂಗ್


ಮಂಗಳೂರು:  'ಕಲೆಕ್ಷನ್ ಮಾಸ್ಟರ್ ಸಿಎಂ ಆಫ್ ಕರ್ನಾಟಕ' ಪೋಸ್ಟ್ ಮಾಡಿದ ಹರೀಶ್ ಪೂಂಜಾಗೆ ಮಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಟಾಂಗ್ ನೀಡಿ ರಾಜಕೀಯದಲ್ಲಿ ಅವರು ಇನ್ನೂ ಬಚ್ಚಾ. ಬಿಜೆಪಿ ಸರಕಾರ, ಮುಖ್ಯಮಂತ್ರಿಗಳಿಗೆ ಹಾಗೆ ಹೇಳಲಿ ನಮಗೆ ಹೇಳೋದು ಬೇಡ ಎಂದು ಹೇಳಿದರು.





ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಹರೀಶ್ ಪೂಂಜಾ ಎಂಎಲ್ಎ ಆಗಿರೋದು ಮೊನ್ನೆ ಮೊನ್ನೆ. ನಾನು 1983ರಲ್ಲಿ ಎಂಎಲ್ಎ ಆಗಿ, 1985ರಲ್ಲೇ ಮಿನಿಸ್ಟರ್ ಆಗಿದ್ದೇನೆ. ಅಂದು ಯಾರೂ ನನ್ನನ್ನು ಕಲೆಕ್ಷನ್ ಎಂದು ಕರೆದಿಲ್ಲ ಎಂದರು.

ಕಾಂಗ್ರೆಸ್ ಗೆ 60ಕೋಟಿ ರೂ. ಆಫರ್ ಆರೋಪ ಕೇಳಿ ಬರುತ್ತಿದೆ. ಎಷ್ಟು ಮಂದಿ ಕಾಂಗ್ರೆಸ್ ನವರಿಗೆ ಈ ರೀತಿಯ ಆಫರ್ ಬಂದಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಇದನ್ನು ಸಿ.ಟಿ.ರವಿಯವರಿಗೆ ಕೇಳಿ. ನನಗೆ ಇದರ ಬಗ್ಗೆ ಗೊತ್ತಿಲ್ಲ. ಬಿಜೆಪಿಯವರು ನಮ್ಮ ಸರಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಮಾಹಿತಿಯಿದೆ. ಆದರೆ ಈ ರೀತಿಯ ಆಫರ್ ಗಳ ಬಗ್ಗೆ ಏನೂ ಗೊತ್ತಿಲ್ಲ ಎಂದು ಹೇಳಿದರು.

ರಾಮಲಿಂಗಾ ರೆಡ್ಡಿಯವರು ಸಿ ಗ್ರೇಡ್ ದೇವಾಲಯಕ್ಕೆ ಫ್ರೀ ಕರೆಂಟ್ ಕೊಡಬೇಕೆಂಬ ಬಗ್ಗೆ ಸುದ್ದಿಗಾರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಅವರೊಂದಿಗೆ ಚರ್ಚೆ ಮಾಡ್ತೇನೆ. ನಿಗಮ ಮಂಡಳಿ ನೇಮಕ ಬಗ್ಗೆ ಮಾತನಾಡಿ, ಮೊದಲ ಹಂತದಲ್ಲಿ ಎಂಎಲ್ಎಗಳಿಗೆ ನಿರ್ದೇಶಕರನ್ನಾಗಿ ಮಾಡುತ್ತೇವೆ. ಎರಡನೇ ಹಂತದಲ್ಲಿ ಕಾರ್ಯಕರ್ತರಿಗೆ, ಮಾಜಿ ಎಂಎಲ್ಎಗಳಿಗೆ ಕೊಡಲಾಗುತ್ತದೆ. ಆದಷ್ಟು ಶೀಘ್ರದಲ್ಲಿ ಮಾಡಲಾಗುತ್ತದೆ.

ಬರಕ್ಕೆ ಕೇಂದ್ರದಿಂದ ಇಂದಿನವರೆಗೆ ಒಂದು ರೂಪಾಯಿ ಬಂದಿಲ್ಲ. ನಾವು ಎರಡು ವರದಿ ಸಲ್ಲಿಸಿದ್ದೇವೆ. ಕೇಂದ್ರದ ತಂಡ ಬಂದಿದೆ. ಅವರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. 236 ತಾಲೂಕುಗಳಲ್ಲಿ 116 ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಿದ್ದೇವೆ. 17,910 ಕೋಟಿ ರೂಪಾಯಿ ಕೇಳಿದ್ದೇವೆ. 33 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಹಾನಿ ಆಗಿದೆ‌. ಬೆಳೆ ನಷ್ಟ ಆಗಿದೆ. ಇಂದಿನವರೆಗೆ ನಮ್ಮ ಮಂತ್ರಿಗಳು ಹೋದಲ್ಲಿ ಭೇಟಿಯನ್ನು ಮಾಡಿಲ್ಲ. ಭೇಟಿಗೂ ಸಮಯವನ್ನು ಕೊಟ್ಟಿಲ್ಲ. ಈ ಮೂಲಕ ಕೇಂದ್ರ ಸರಕಾರ ಕರ್ನಾಟಕದ ಮೇಲೆ ಮಲಧೋರಣೆ ತೋರಿಸುತ್ತಿದೆ.

ಕಾರ್ಕಳ ಪರಶುರಾಮ ಮೂರ್ತಿಯ ಬಗ್ಗೆ ಪ್ರಶ್ನೆಗೆ ಅದನ್ನು ನಕಲಿಯೋ ಅಸಲಿಯೋ ಎಂದು ತನಿಖೆ ಮಾಡಿಸುತ್ತೇವೆ. ಸೌಜನ್ಯಾ ಪ್ರಕರಣದ ಮರುತನಿಖೆ ಬಗ್ಗೆಗಿನ ಪ್ರಶ್ನೆಗೆ ಅದು ಸಿಬಿಐ ಮಾಡಿರೋದು, ಕೇಂದ್ರ ಸರಕಾರ ಮರುತನಿಖೆ ಮಾಡಿಸಬೇಕು. ನಾವೇನು ಮಾಡಲು ಆಗುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.


*Union Government showing stepmother attitude towards Karnataka: Chief Minister Siddaramaiah*

Mangaluru, October 28:
Chief Minister Siddaramaiah said that the central government is showing a step-motherly attitude towards Karnataka in releasing drought relief to the state.

He was  speaking  to the media in Mangaluru airport today.

Answering a  question regarding  drought relief  from the Centre, a team has come from the Centre  to study the drought in the state. The state has also submitted  two appeals. Out of 236 taluks, 216 taluks have been declared drought prone. Around 30 thousand crores worth of crops have been damaged in the state. A compensation of around 17,900 crores has been sought from the Centre. Butnot a single rupee has been released from the Centre till now and the Union Minister is not even giving time to meet the State Minister, the CM explained.

*BJP's attempt to destabilize Congress:*

Replying to a question on  information about BJP giving money to Congress MLAs, the CM said that  BJP there is information that the BJP is  attempting to destabilize  destabilize the Congress government. He said  there is information about the BJP offering 50 crore or  about the offer of positions.


Replyinga about his secret meeting with Home Minister Parameshwar, the CM  said that there was no politics involved except that he had gone to his house for dinner on the invitation of the Home Minister.

Responding to Harish Poonja's tweet about the term of CM, the chief minister said, Harish Poonja is a recent MLA, I have been an MLA since 1983.

Responding to the appointment of Chairmen to the Corporation and  Boards,  the appointment of the Chairmen to the Corporation and Boards in the first phase will be done soon. Party workers and former MLAs will be considered in the second phase, he said.

Responding to the media's query on whether a re-investigation could be conducted in the Soujanya case, the CM said that the Center is supposed to take action as the investigation was done by the CBI.


Ads on article

Advertise in articles 1

advertising articles 2

Advertise under the article