-->
ಮಂಗಳೂರು: ಹುಲಿವೇಷ ಕುಣಿಯುತ್ತಿದ್ದಾಲೇ ಆಯತಪ್ಪಿ ಬಿದ್ದ ಯುವಕ - ದೇವಿ ಸನ್ನಿಧಾನದಲ್ಲಿ ಆಶ್ಚರ್ಯಕರ ರೀತಿ ಪಾರಾದ ಹುಲಿವೇಷಧಾರಿ

ಮಂಗಳೂರು: ಹುಲಿವೇಷ ಕುಣಿಯುತ್ತಿದ್ದಾಲೇ ಆಯತಪ್ಪಿ ಬಿದ್ದ ಯುವಕ - ದೇವಿ ಸನ್ನಿಧಾನದಲ್ಲಿ ಆಶ್ಚರ್ಯಕರ ರೀತಿ ಪಾರಾದ ಹುಲಿವೇಷಧಾರಿ


ಮಂಗಳೂರು: ಹುಲಿವೇಷ ಕುಣಿಯುತ್ತಿದ್ದ ವೇಳೆ ರಿವರ್ಸ್ ಪಲ್ಟಿ ಹೊಡೆಯಲು ಹೋದ ಹುಲಿವೇಷಧಾರಿಯೊಬ್ಬ  ಆಯತಪ್ಪಿ ಬಿದ್ದು ಕೂದಲೆಳೆಯ ಅಂತರದಲ್ಲಿ ಭಾರೀ ಅನಾಹುತವೊಂದು ತಪ್ಪಿದ ಘಟನೆ ಮಂಗಳೂರಿನ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ನಡೆದಿದೆ.

ಮಂಗಳಾದೇವಿಯ ಮುಳಿಹಿತ್ಲುವಿನ ಎಂಎಫ್ ಸಿ ಹುಲಿವೇಷ ತಂಡದ ಹುಲಿವೇಷಧಾರಿ ಶಂಕರ್ ಎಂಬಾತ. ಹರಕೆಯ ಹಿನ್ನಲೆಯಲ್ಲಿ ಶ್ರೀ ‌ಮಂಗಳಾದೇವಿ ದೇವಸ್ಥಾನದ ಮುಂಭಾಗ ಹುಲಿವೇಷ ಕುಣಿಯುತ್ತಿದ್ದ. ಈ ವೇಳೆ ಅವರು ರಿವರ್ಸ್ ಪಲ್ಟಿ ಹೊಡೆಯುತ್ತಿದ್ದರು. ಈ ಸಂದರ್ಭ ಆಯತಪ್ಪಿ ಬಿದ್ದ ಅವರ ತಲೆ ನೆಲಕ್ಕೆ ಬಡಿದಿದಿದೆ.

ತಲೆ ನೆಲಕ್ಕೆ ಬಡಿದ ಪರಿಣಾಮ ಹುಲಿವೇಷಧಾರಿ ಶಂಕರ್ ಕತ್ತು ಉಳುಕಿದೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಸಣ್ಣ ಗಾಯದೊಂದಿಗೆ ಅಪಾಯದಿಂದ ಯುವಕ ಶಂಕರ್ ಪಾರಾಗಿದ್ದಾರೆ. ಅವರು ಆಯತಪ್ಪಿ ಬೀಳುತ್ತಿರುವ ವೀಡಿಯೋ ವೈರಲ್ ಆಗಿ ದೊಡ್ಡ ಏಟಾಗಿದೆ ಎಂದು ಪ್ರಚಾರವಾಗಿತ್ತು. ಈ ಹಿನ್ನಲೆಯಲ್ಲಿ ಶಂಕರ್ ಅವರೇ ವೀಡಿಯೋ ಮಾಡಿ ತನಗೇನು ಆಗಿಲ್ಲ ಎಂದು ತಿಳಿಸಿದ್ದಾರೆ. 

Ads on article

Advertise in articles 1

advertising articles 2

Advertise under the article