ಭಾಭಾ ಪರಮಾಣು ಸಂಶೋಧನಾ ಕೇಂದ್ರದಲ್ಲಿ 19 ವರ್ಷದ ವಿದ್ಯಾರ್ಥಿನಿಯ ಸಾಮೂಹಿಕ ಅತ್ಯಾಚಾರ
Monday, November 20, 2023
ಮುಂಬಯಿ: ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ 'ಭಾಭಾ ಅಟೊಮಿಕ್ ರಿಸರ್ಚ್ ಸೆಂಟರ್ (ಬಿಎಆರ್‌ಸಿ)' ಕೇಂದ್ರ ಕ್ವಾಟರ್ಸ್ ನಲ್ಲಿ 19 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಲಾಗಿದೆ ಎಂದು ವರದಿಯಾಗಿದೆ.
ಛಂಬೂರಿನ ಪೋಸ್ಟಲ್ ಕಾಲೊನಿಯಲ್ಲಿನ ಕ್ವಾಟಸ್ ನಲ್ಲಿ ತಂಗಿದ್ದ ಪಾಲ್ ಘರ್ ಜಿಲ್ಲೆಯ ವಿದ್ಯಾರ್ಥಿನಿ ಮೇಲೆ ನ.15ರ ನಡುರಾತ್ರಿ ದುಷ್ಕೃತ್ಯ ಎಸಗಲಾಗಿದೆ. ಈ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. ಬಿಎಆರ್‌ಸಿನಲ್ಲಿ ಕಾರ್ಯನಿರ್ವಹಿಸುವ ತಂದೆಯನ್ನು ಕಾಣಲು ಯುವತಿ ಆಗಮಿಸಿದ್ದಳು. ಆ ವೇಳೆ ಇಬ್ಬರು ದುಷ್ಕರ್ಮಿಗಳು ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮೊದಲ ಆರೋಪಿಯನ್ನು 26 ವರ್ಷದ ಅಜಿತ್ ಕುಮಾರ್ ಯಾದವ್ ಹಾಗೂ ಎರಡನೇ ಆರೋಪಿಯನ್ನುಪ್ರಭಾಕರ್ ಯಾದವ್ ಎಂದು ಗುರುತಿಸಲಾಗಿದೆ.
ವಿದ್ಯಾರ್ಥಿನಿ ತಂಗಿದ್ದ ವಸತಿ ಗೃಹಕ್ಕೆ ಆಹಾರ ತಯಾರಿಕೆಯ ಪದಾರ್ಥವನ್ನು ಪಡೆಯುವ ನೆಪದೊಂದಿಗೆ ತೆರಳಿದ ಆರೋಪಿ ಅಜಿತ್ ಯುವತಿಗೆ ತಂಪು ಪಾನೀಯ ಕುಡಿಯುವಂತೆ ಬಲವಂತ ಮಾಡಿದ್ದಾನೆ. ನಂತರ ಆಕೆಯು ಪ್ರಜ್ಞೆ ತಪ್ಪಿಬಿದ್ದಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.