-->
ಮಂಗಳೂರು: ಅಯೋಧ್ಯೆ ರಾಮಮಂದಿರದಲ್ಲಿ ಜ.22ರ ಅಭಿಜಿನ್ ಮುಹೂರ್ತದಲ್ಲಿ ರಾಮದೇವರ ಪ್ರಾಣಪ್ರತಿಷ್ಠೆ - ಪೇಜಾವರ ಶ್ರೀ

ಮಂಗಳೂರು: ಅಯೋಧ್ಯೆ ರಾಮಮಂದಿರದಲ್ಲಿ ಜ.22ರ ಅಭಿಜಿನ್ ಮುಹೂರ್ತದಲ್ಲಿ ರಾಮದೇವರ ಪ್ರಾಣಪ್ರತಿಷ್ಠೆ - ಪೇಜಾವರ ಶ್ರೀ

ಮಂಗಳೂರು: ಅಯೋಧ್ಯೆ ರಾಮಮಂದಿರದಲ್ಲಿ ಮಕರ ಸಂಕ್ರಾಂತಿ ಮುಗಿಯುತ್ತಿದ್ದಂತೆ ಉತ್ತರಾಯಣದ ಪರ್ವ ಕಾಲದಲ್ಲಿ ಜನವರಿ 22ರ ಅಭಿಜಿನ್ ಮುಹೂರ್ತದಲ್ಲಿ ಶ್ರೀರಾಮದೇವರ ಪ್ರಾಣ ಪ್ರತಿಷ್ಠೆ ನಡೆಯಲಿದೆ. ರಾಮಮಂದಿರವನ್ನು ಪ್ರಧಾನಿ ನರೇಂದ್ರ ಮೋದಿಯವರು ಮಂದಿರದ ಉದ್ಘಾಟನೆ ಮಾಡಲಿದ್ದಾರೆ ಎಂದು ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಹೇಳಿದರು.

ಮಂಗಳೂರಿನ ಕದ್ರಿಯ ಮಂಜು ಪ್ರಾಸಾದದಲ್ಲಿ ಮಾತನಾಡಿದ ಅವರು, ರಾಮದೇವರ ಪ್ರತಿಷ್ಠಾಪನೆಯ ದಿನ ಎಲ್ಲರಿಗೂ ಬರಲು ಅವಕಾಶ ಇರುವುದಿಲ್ಲ. ಆದ್ದರಿಂದ ಎಲ್ಲರೂ ತಮ್ಮ ತಮ್ಮ ಊರಿನ ದೇವಾಲಯ, ಮಂದಿರಗಳಲ್ಲಿ ಅಳವಡಿಸಿರುವ ಬೃಹತ್ ಪರದೆಯಲ್ಲಿ ಆ ದೃಶ್ಯವನ್ನು ವೀಕ್ಷಿಸಬಹುದು. ಬಳಿಕ ಪೂಜೆ ಭಜನೆ ಪ್ರಸಾದ ವಿತರಣೆ ಮಾಡಬೇಕು. ರಾತ್ರಿಯ ಹೊತ್ತು ಐದು ಶತಮಾನಗಳ ದ್ಯೋತಕವಾಗಿ ಐದು ದೀಪಗಳನ್ನು ಬೆಳಗಬೇಕು. ಜನವರಿ 23ರಿಂದ ಮಾರ್ಚ್ 10ರವರಗೆ 48ದಿವಸಗಳ ಕಾಲ ರಾಮಮಂದಿರದಲ್ಲಿ ಮಂಡಲ ಉತ್ಸವ ನಡೆಯುತ್ತದೆ ಎಂದರು.

ರಾಮಮಂದಿರದಲ್ಲಿ ಯಾವುದೇ ಸೇವಾ ರೂಪದ ಪಟ್ಟಿ ಇರೋದಿಲ್ಲ. ನಾವು ರಾಮಂದಿರ ಮಾತ್ರವಲ್ಲ, ರಾಮರಾಜ್ಯದ ಕನಸು ಕಂಡವರು. ಆದ್ದರಿಂದ ರಾಮಭಕ್ತಿ ಬೇರೆಯಲ್ಲ, ದೇಶ ಭಕ್ತಿ ಬೇರೆಯಲ್ಲ.‌  ರಾಮ ಸೇವೆ ಮಾಡುವ ಇಚ್ಛೆಯುಳ್ಳವರು ಅಶಕ್ತರಿಗೆ ಸಹಾಯ ಮಾಡುವ ಮೂಲಕ, ತಾವು ಮಾಡುವ ಕೆಲಸದಲ್ಲಿಯೇ ಸೇವೆ ಮಾಡುವ ಮೂಲಕ ದೇಶಸೇವೆ ಮಾಡಬಹುದು. ಇದನ್ನೇ ರಾಮದೇವರ ಸೇವೆ ಎಂದು ಮಾಡಿ. ರಾಮಮಂದಿರಕ್ಕೆ ಬಂದ ವೇಳೆ ಇದನ್ನೇ ಸೇವೆ ಎಂದು ರಾಮಾರ್ಪಣೆ ಮಾಡಿ ಎಂದು ಪೇಜಾವರ ಶ್ರೀಗಳು ಹೇಳಿದರು.

Ads on article

Advertise in articles 1

advertising articles 2

Advertise under the article