ಪುತ್ರಿಗೆ 50.63 ಕೋಟಿ ರೂ.ಗಳ ಬಂಗಲೆ ಗಿಫ್ಟ್ ಕೊಟ್ಟ ಬಚ್ಚನ್!
Sunday, November 26, 2023
ಮುಂಬಯಿ: ಬಾಲಿವುಡ್ ಬಿಗ್‌ಬಿ ಅಮಿತಾಬ್ ಬಚ್ಚನ್ ಅವರು ತಮ್ಮ ಪುತ್ರಿ ಶ್ವೇತಾ ನಂದಾ ಅವರಿಗೆ 50.63 ಕೋಟಿ ರೂ. ಮೌಲ್ಯದ ಐಶಾರಾಮಿ ಬಂಗಲೆಯನ್ನು ಉಡುಗೊರೆಯಾಗಿ ನೀಡಿದ್ದಾರೆ.
ಸಬ್ ಅರ್ಬನ್ ಜುಹುವಿನ ವಿಟ್ಠಲನಗರದಲ್ಲಿರುವ 'ಪ್ರತೀಕ್ಷಾ' ಹೆಸರಿನ ಈ ಬಂಗಲೆಯು 50.63 ಕೋಟಿ ರೂ. ಗಿಂತಲೂ ಹೆಚ್ಚಿನ ಮೌಲ್ಯದ್ದಾಗಿದ್ದು, ಇದು ಸ್ವತಃ ಬಿಗ್‌ಬಿ ನಗರದಲ್ಲಿ ಕೊಂಡುಕೊಂಡಿದ್ದ ಮೊದಲ ಆಸ್ತಿಯೂ ಆಗಿತ್ತು.
ಅಲ್ಲದೇ ಇದೇ ನಗರದಲ್ಲಿ ಬಚ್ಚನ್ ಕುಟುಂಬ ಹೊಂದಿರುವ 3 ಬಂಗಲೆಗಳ ಪೈಕಿ ಒಂದಾಗಿತ್ತು. ಇದೀಗ ಬಚ್ಚನ್ ತಮ್ಮ ಮಗಳಿಗೆ ಇದನ್ನು ಉಡುಗೊರೆಯಾಗಿ ನೀಡಿದ್ದಾರೆ. 890.47 ಚ. - ಮೀ. ಹಾಗೂ 674 ಚ.ಮೀ. ವ್ಯಾಪ್ತಿಯ 2 ನಿವೇಶನಗಳಲ್ಲಿ ಬಂಗಲೆ ನಿರ್ಮಾಣಗೊಂಡಿದೆ.