-->
ಪುತ್ರನಿಗೆ ಸಂಬಂಧಿಸಿದ ಕಂಪೆನಿಗೆ ಅಕ್ರಮವಾಗಿ 850 ಕೋಟಿ ರೂ. ಲಾಭ ಮಾಡಿಕೊಟ್ಟ ಸರಕಾರದ ಮುಖ್ಯ ಕಾರ್ಯದರ್ಶಿ

ಪುತ್ರನಿಗೆ ಸಂಬಂಧಿಸಿದ ಕಂಪೆನಿಗೆ ಅಕ್ರಮವಾಗಿ 850 ಕೋಟಿ ರೂ. ಲಾಭ ಮಾಡಿಕೊಟ್ಟ ಸರಕಾರದ ಮುಖ್ಯ ಕಾರ್ಯದರ್ಶಿ


ನವದೆಹಲಿ: ಪುತ್ರನಿಗೆ ಸಂಬಂಧಪಟ್ಟ ಕಂಪನಿಯೊಂದಕ್ಕೆ ಅಕ್ರಮವಾಗಿ 850 ಕೋಟಿ ರೂ. ಲಾಭ ಮಾಡಿಕೊಟ್ಟ  ಆರೋಪವೊಂದು ದೆಹಲಿ ಸರಕಾರದ ಮುಖ್ಯ ಕಾರ್ಯದರ್ಶಿಯ ಮೇಲೆಯೇ ಕೇಳಿ ಬಂದಿದೆ. ಈ ಸಂಬಂಧ ಸಿಎಂ ಅವರಿಗೆ 670 ಪುಟಗಳ ಪ್ರಾಥಮಿಕ ವರದಿ ಕೂಡ ಸಲ್ಲಿಕೆಯಾಗಿದೆ.

ಪ್ರಕರಣದಲ್ಲಿ ದೆಹಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಆರೋಪಿ.

ದ್ವಾರಕಾ ಎಕ್ಸ್​ಪ್ರೆಸ್​ವೇ ಯೋಜನೆಯಲ್ಲಿ ನರೇಶ್ ಕುಮಾರ್ ತಮ್ಮ ಪುತ್ರನಿಗೆ ಸಂಬಂಧಪಟ್ಟ ಕಂಪೆನಿಗೆ ಅಕ್ರಮವಾಗಿ 850 ಕೋಟಿ ರೂ. ಲಾಭ ಮಾಡಿಕೊಟ್ಟಿದ್ದಾರೆ. ಈ ಬಗ್ಗೆ ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರಿಗೆ ಸಲ್ಲಿಸಲಾದ 670 ಪುಟಗಳ ಪ್ರಾಥಮಿಕ ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆ. ದೆಹಲಿ ವಿಜಿಲೆನ್ಸ್ ಮಿನಿಸ್ಟರ್ ಅತಿಷಿ ಈ ಕುರಿತ ತನಿಖೆಗೆ ಆದೇಶಿಸಿದ್ದರು.

ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ವಿರುದ್ಧ ಮಾಡಲಾಗಿರುವ ಎಲ್ಲ ಆರೋಪಗಳು ಸುಳ್ಳು ಹಾಗೂ ಆಧಾರರಹಿತ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಶ್ವಿನಿ ಕುಮಾರ್ ಸುದ್ದಿಗೋಷ್ಠಿ ನಡೆಸಿ ಸಮಜಾಯಿಷಿ ನೀಡಿದ್ದರು‌. ಇದರ ಬೆನ್ನಿಗೇ ಈ ಪ್ರಕರಣಕ್ಕೆ ಸಂಬಂಧಿತ ಪ್ರಾಥಮಿಕ ವರದಿ ಹೊರಬಿದ್ದಿದೆ. ಅದಾಗ್ಯೂ ಈ ವಿಚಾರವಾಗಿ ಮುಖ್ಯ ಕಾರ್ಯದರ್ಶಿ ನರೇಶ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ದ್ವಾರಕಾ ಎಕ್ಸ್​ಪ್ರೆಸ್​ವೇ ಸಂಬಂಧಿಸಿದ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ನರೇಶ್ ಕುಮಾರ್, ಡಿಸಿ ಹೇಮಂತ್ ಕುಮಾರ್ ಹಾಗೂ ಭೂಮಾಲಕರ ಮಧ್ಯೆ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ನರೇಶ್ ಕುಮಾರ್ ಪುತ್ರ ಕರಣ್ ಚೌಹಾನ್​ಗೆ ಸಂಬಂಧಿತ ಕಂಪೆನಿಗೆ ಅವರು ಕೋಟಿಗಟ್ಟಲೆ ರೂ. ಮೌಲ್ಯದ ಅನುಕೂಲವನ್ನು ಅಕ್ರಮವಾಗಿ ಮಾಡಿರುವುದನ್ನೂ ಉಲ್ಲೇಖಿಸಲಾಗಿದೆ. ಈ ವ್ಯವಹಾರದಲ್ಲಿ 850 ಕೋಟಿ ರೂ. ಮೊತ್ತದ ಅಕ್ರಮವಾಗಿದೆ. ಆದರೂ ಬರೀ 312 ಕೋಟಿ ರೂ. ಮೊತ್ತದ್ದ ಹಗರಣ ಎಂದು ತೋರಿಸಲು ವಿಜಿಲೆನ್ಸ್​ನ ಕೆಲವು ಅಧಿಕಾರಿಗಳೊಂದಿಗೆ ನರೇಶ್ ಕುಮಾರ್ ಪ್ರಯತ್ನ ನಡೆಸಿದ್ದಾರೆಂದೂ ಹೇಳಲಾಗುತ್ತಿದೆ.

Ads on article

Advertise in articles 1

advertising articles 2

Advertise under the article