ಬಜ್ಪೆ: ಗಾಂಜಾ ಸಾಗಾಟ ಮಾಡುತ್ತಿದ್ದ ಮೂವರು ಅರೆಸ್ಟ್
Sunday, November 19, 2023
ಬಜಪೆ : ಸ್ಕೂಟರ್ ನಲ್ಲಿ ಗಾಂಜಾ ಸಾಗಿಸುತ್ತಿದ್ದ ಮೂವರು ಆರೋಪಿಗಳನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳ ತಾಲೂಕಿನ ಕೊಳ್ತಮಜಲು ಬಡಗ ಬೆಳ್ಳೂರು ನಿವಾಸಿ ತೇಜಾಕ್ಷ ಪೂಜಾರಿ(22), ಮೊಡಂಕಾಪು ನಿವಾಸಿ ಸಂತೋಷ ಪೂಜಾರಿ(24) ಹಾಗೂ ತೆಂಕ ಎಡಪದವು ಶಿಬ್ರಿಕೆರೆ ನಿವಾಸಿ ಅಬೂಬಕ್ಕರ್ ಸಿದ್ದಿಕ್ (26) ಬಂಧಿತ ಆರೋಪಿಗಳು.
ಬಜ್ಪೆ ಠಾಣೆಯ ಪಿಎಸ್ಐ ಗುರಪ್ಪ ಕಾಂತಿ ಹಾಗೂ ಸಿಬ್ಬಂದಿ ಕೈಕಂಬದ ಪೊಳಲಿ ದ್ವಾರದ ಬಳಿಯ ಕಾಜಿಲ ಎಂಬಲ್ಲಿ ವಾಹನ ತಪಾಸಣೆ ನಡೆಸುತ್ತಿದ್ದರು. ಈ ವೇಳೆ ಅಡೂರುನಿಂದ ಸ್ಕೂಟರ್ ನಲ್ಲಿ ತ್ರಿಪಲ್ ರೈಡಿಂಗ್ ನಲ್ಲಿ ಬರುತ್ತಿದ್ದವರನ್ನು ಗಮನಿಸಿ ವಾಹನ ನಿಲ್ಲಿಸುವಂತೆ ಸೂಚನೆ ನೀಡಿದ್ದರು. ಈ ವೇಳೆ ವಾಹನವನ್ನು ನಿಲ್ಲಿಸಿ ಮೂವರು ಪರಾರಿಯಾಗಲು ಯತ್ನಿಸಿದ್ದರು. ವಿಚಾರಣೆಯ ವೇಳೆ ಆರೋಪಿಗಳು ಗಾಂಜಾ ಸಾಗಾಟ ಮಾಡುತ್ತಿದ್ದುದಾಗಿ ಬಾಯ್ದಿಟ್ಟಿದ್ದಾರೆ.
ಪೊಲೀಸರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು, 6000 ರೂ ಮೌಲ್ಯದ 340 ಗ್ರಾಂ ಗಾಂಜಾ ಹಾಗೂ 40000 ಮೌಲ್ಯದ ಸ್ಕೂಟರ್ ಅನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.